ಗುಲಾಬಿ ಪಲಾವ್ ಮಾಡಿ ನೋಡಿ

ಶನಿವಾರ, 6 ಜೂನ್ 2020 (13:42 IST)
ಗುಲಾಬಿ ಪಲಾವ್ ವಿಶೇಷ ಸಂದರ್ಭದಲ್ಲಿ ಮಾಡಿದರೆ ಆ ಸಮಾರಂಭದ ಆಹಾರದ ರುಚಿ ಮತ್ತಷ್ಟು ಹೆಚ್ಚಿಸುತ್ತದೆ.

ಏನೇನ್ ಬೇಕು?
ಬೀಟರೂಟ್ 1
ಈರುಳ್ಳಿ 2
ಹಸಿಮೆನಸಿನಕಾಯಿ 8
ತೆಂಗಿನ ಕಾಯಿ ಅರ್ಧ
ಜೀರಿಗೆ ಅರ್ಧ ಚಮಚ
ಅಕ್ಕಿ ಅರ್ಧ ಕಿಲೋ
ತುಪ್ಪ 2 ಬಟ್ಟಲು
ಮೆಣಸು 1 ಚಮಚ
ಸಾಸಿವೆ 1 ಚಮಚ
ತೊಗರಿಬೇಳೆ 1 ಸೌಟು
ತೊರಗಿಬೇಳೆ 1 ಸೌಟು
ಕರಿದ ಗೋಡಂಬಿ 1 ಸೌಟು
ಅರಿಶಿನ ಅರ್ಧ ಚಮಚ
ಉಪ್ಪು

ಮಾಡೋದು ಹೇಗೆ?: ಉದುರು ಅನ್ನ ಮಾಡಿ ಬೀಟ್ ರೂಟ್ ಬೇಯಿಸಿ ತುರಿಯಿರಿ. ತುಪ್ಪದಲ್ಲಿ ಸಾಸಿವೆ, ಜೀರಿಗೆ, ಮೆಣಸು, ಉದ್ದಿನಬೇಳೆ, ತೊರಗಿಬೇಳೆ, ಹಸಿಮೆನಸಿನಕಾಯಿ ಹುರಿದುಕೊಳ್ಳಿ. ಬದನೆಕಾಯಿ ಹಾಕಿ ಕೆದಕಿ, ಬೀಟರೂಟ್ ತುರಿದು ಹಾಕಿ, ಉಪ್ಪು, ಅರಿಶಿನ, ತೆಂಗಿನತುರಿ ಹಾಕಿ ಕೆದಕಿ. ನಿಂಬೆ ರಸ, ಗೋಡಂಬಿ ಹಾಕಿ 5 ನಿಮಿಷದ ನಂತರ ಕೆಳಗಿಳಿಸಿದರೆ ಗುಲಾಬಿ ಪಲಾವ್ ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ