ರುಚಿಗೂ ಸೈ, ಆರೋಗ್ಯಕ್ಕೂ ಸೈ ಒಮ್ಮೆ ಟ್ರೈ ಮಾಡಿ

ಮಂಗಳವಾರ, 23 ಆಗಸ್ಟ್ 2022 (10:52 IST)
ಕಹಿಯಾದ ಹಾಗಲಕಾಯಿಯ ಅಡುಗೆಯನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ಅತ್ಯಂತ ಆರೋಗ್ಯಕರ ತರಕಾರಿ ಪಟ್ಟಿಯಲ್ಲಿ ಇದು ಸೇರುತ್ತದೆ.
 
ಮನೆಯ ಎಲ್ಲಾ ಸದಸ್ಯರಿಗೂ ಹಾಗಲಕಾಯಿಯ ಅಡುಗೆಯನ್ನು ಮಾಡಿ ಬಡಿಸುವುದು ಗೃಹಿಣಿಯರಿಗೆ ಒಂದು ಸವಾಲಾಗಿಯೇ ಉಳಿದಿದೆ.

ಆದರೆ ಇಂದು ನಾವು ತೋರಿಸುತ್ತಿರುವ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿದರೆ, ಎಂತಹ ಹಾಗಲಕಾಯಿ ದ್ವೇಷಿಗಳೂ ಅದನ್ನು ಇಷ್ಟಪಡುತ್ತಾರೆ.

ಬೇಕಾಗುವ ಪದಾರ್ಥಗಳು

* ಹಾಗಲಕಾಯಿ – 2
* ಕಾರ್ನ್ ಫ್ಲೋರ್ – 1 ಟೀಸ್ಪೂನ್
* ಕಡಲೆ ಹಿಟ್ಟು – 1
* ಅರಿಶಿನ – ಅರ್ಧ ಟೀಸ್ಪೂನ್
* ಮೆಣಸಿನ ಪುಡಿ – 1 ಟೀಸ್ಪೂನ್
* ಅಕ್ಕಿ ಹಿಟ್ಟು – 1 ಟೀಸ್ಪೂನ್
* ಆಮ್ಚೂರ್ ಪುಡಿ – 1 ಟೀಸ್ಪೂನ್
* ಉಪ್ಪು – ರುಚಿಗೆ ತಕ್ಕಷ್ಟು
* ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು

ಮಾಡುವ ವಿಧಾನ

* ಮೊದಲಿಗೆ ಹಾಗಲಕಾಯಿಯನ್ನು ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ.
* ಕತ್ತರಿಸಿದ ಹಾಗಲಕಾಯಿಗೆ ಕಾರ್ನ್ ಫ್ಲೋರ್, ಕಡಲೆ ಹಿಟ್ಟು, ಅಕ್ಕಿಹಿಟ್ಟು, ಅರಿಶಿನ, ಮೆಣಸಿನ ಪುಡಿ, ಆಮ್ಚೂರ್ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿ.
* ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಸ್ವಲ್ಪ ಸ್ವಲ್ಪವೇ ಹಾಗಲಕಾಯಿ ಮಿಶ್ರಣವನ್ನು ಎಣ್ಣೆಗೆ ಹಾಕಿ ಕರಿಯಿರಿ.
* ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಫ್ರೈ ಮಾಡಿ.
– ಗರಿಗರಿಯಾದ ಹಾಗಲಕಾಯಿ ಫ್ರೈ ತಯಾರಾಗಿದ್ದು, ಇದನ್ನು ಟೀ ಟೈಮ್ ಅಥವಾ ಊಟದೊಂದಿಗೆ ಸೈಡ್ ಡಿಶ್ ಆಗಿ ಬಡಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ