ಉದ್ದಿನ ವಡೆ

ಬೇಕಾಗುವ ಸಾಮಾಗ್ರಿಗಳು :

ಉದ್ದಿನ ಬೇಳೆ- 2 ಕಪ್
ಕೊತ್ತಂಬರಿ ಸೊಪ್ಪು- 1/4 ಕಪ್
ಕರಿಬೇವಿನ ಸೊಪ್ಪು- ಸ್ವಲ್ಪ
ಕೆಂಪು ಮೆಣಸು-4
ಹಸಿ ಮೆಣಸು- 3
ನೀರುಳ್ಳಿ- 2
ಉಪ್ಪು- ರುಚಿಗೆ ತಕ್ಕಷ್ಟು
ಶುಂಠಿ- ಸ್ವಲ್ಪ
ಹುರಿಯಲು ಎಣ್ಣೆ

ತಯಾರಿಸುವ ವಿಧಾನ :

ಉದ್ದಿನ ಬೇಳೆಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನಸಿಡಿ. ಅನಂತರ ಚೆನ್ನಾಗಿ ತೊಳೆದು ಅದರ ನೀರನ್ನು ಸಂಪೂರ್ಣವಾಗಿ ಆರಿಸಿ.

ಈ ಉದ್ದಿನ ಬೇಳೆಯನ್ನು ಕೆಂಪು ಮೆಣಸಿನೊಂದಿಗೆ ಹೆಚ್ಚು ನಯವಾಗದಂತೆ ಗಟ್ಟಿಯಾಗಿ ಅರೆಯಿರಿ. ನೀರುಳ್ಳಿ, ಹಸಿ ಮೆಣಸು, ಶುಂಠಿ, ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ನುಣ್ಣನೆ ಹೆಚ್ಚಿದ ನಂತರ ಉದ್ದಿನ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಈ ಹಿಟ್ಟನ್ನು ವಡೆಯನ್ನಾಗಿ ಮಾಡಿ ಕುದಿಯುತ್ತಿರುವ ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ. ಈ ವಡೆಗಳು ಬಿಸಿ ಅಥವಾ ತಣ್ಣಗಾದ ನಂತರ ಸೇವಿಸಿದರೂ ರುಚಿಯಾಗಿರುವುದು.

ವೆಬ್ದುನಿಯಾವನ್ನು ಓದಿ