ಅಕ್ಕಿ ಹುಡಿ- 3 ಕಪ್ ತುರಿದ ತೆಂಗಿನ ಕಾಯಿ- 1 1/2 ಕಪ್ ಮೆಣಸಿನ ಹುಡಿ- 4 ಟೇಬಲ್ ಚಮಚ ಇಂಗು- 1/4 ಟೀ ಚಮಚ ತುಪ್ಪ-1/2 ಕಪ್ ನೀರು- ಅಗತ್ಯವಿರುವಷ್ಟು
ತಯಾರಿಸುವ ವಿಧಾನ :
ತುರಿದ ತೆಂಗಿನಕಾಯಿಯನ್ನು ಅಕ್ಕಿ ಹುಡಿಯೊಂದಿಗೆ ಚೆನ್ನಾಗಿ ಮಿಶ್ರಮಾಡಿ ದಪ್ಪವಾದ ಹಿಟ್ಟು ತಯಾರಿಸಿ.ನಂತರ ಮೆಣಸಿನ ಹುಡಿ,ಉಪ್ಪು, ಇಂಗು, ತುಪ್ಪವನ್ನು ಅದಕ್ಕೆ ಬೆರಿಸಿ ಚೆನ್ನಾಗಿ ಮಿಶ್ರಮಾಡಿ. ಹಿಟ್ಟು ಚೆನ್ನಾಗಿ ಅಂಟು ಬಂದನಂತರ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. ನಂತರ ಅವುಗಳನ್ನು ದಪ್ಪವಾದ ಬಳೆಯಾಕಾರದಲ್ಲಿ ಮಾಡಿ ಕುದಿಯುತ್ತಿರುವ ಎಣ್ಣೆಯಲ್ಲಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.