ಗೋಳಿಬಜೆ

ಬೇಕಾಗುವ ಸಾಮಾಗ್ರಿಗಳು:

ಮೈದಾಹಿಟ್ಟು - 4 ಕಪ್
ಕಡಲೇ ಹಿಟ್ಟು - ಅರ್ಧ ಕಪ್
ಸಕ್ಕರೆ - ಸ್ವಲ್ಪ
ಹಸಿಮೆಣಸು - 4-5
ಅಡಿಗೆ ಸೋಡಾ
ಉಪ್ಪು
ಕರಿಯಲು ಎಣ್ಣೆ

ಮಾಡುವ ವಿಧಾನ:
ಮೈದಾಹಿಟ್ಟು, ಕಡಲೇ ಹಿಟ್ಟು, ಉಪ್ಪು, ಸಕ್ಕರೆ ಮತ್ತು ಚಿಟಿಕೆ ಸೋಡಾ ಎಲ್ಲವನ್ನೂ ಒಟ್ಟಾಗಿ ಕಲಸಿ.ಹಸಿಮೆಣಸನ್ನು ಸಣ್ಣಗೆ ಹೆಚ್ಚಿ ಇದಕ್ಕೆ ಬೆರೆಸಿ.ನಂತರ ಹಿಟ್ಟನ್ನು ಸ್ವಲ್ಪ ಸ್ವಲ್ಪ ಎಣ್ಣೆಗೆ ಹಾಕಿ ಕರಿಯಿರಿ.

ವೆಬ್ದುನಿಯಾವನ್ನು ಓದಿ