ತುಪ್ಪಾನ್ನ

ಬೇಕಾಗುವ ಸಾಮಾಗ್ರಿಗಳು :
ಬಸ್ಮತಿ ಅಕ್ಕಿ -2 ಕಪ್
ತುಪ್ಪ -6 ಟೇಬಲ್ ಚಮಚ
ಗೋಡಂಬಿ-10
ಒಣದ್ರಾಕ್ಷಿ- 10
ನೀರುಳ್ಳಿ- 2 ದೊಡ್ಡದು(ಹೋಳುಗಳಾಗಿ ಹೆಚ್ಚಿದ್ದು)
ಬೆಳ್ಳುಳ್ಳಿ- 1ಟೇಬಲ್ ಚಮಚ (ನುಣ್ಣನೆ ಅರೆದದ್ದು)
ದಾಲ್ಚೀನಿ-ಸ್ವಲ್ಪ
ಏಲಕ್ಕಿ-4
ಬೇ ಎಲೆ-2
ಕೊತ್ತಂಬರಿ ಸೊಪ್ಪು-3 ಚಿಗುರು
ನೀರು-3 ಕಪ್
ಉಪ್ಪು-ರುಚಿಗೆ ತಕ್ಕಷ್ಟು

ಪಾಕ ವಿಧಾನ :
ಅಕ್ಕಿಯನ್ನು ತೊಳೆದು ಚೆನ್ನಾಗಿ ಅದರ ನೀರನ್ನು ಬತ್ತಿಸಿ. ಅಗಲವಾದ ಪಾತ್ರೆಯಲ್ಲಿ 3 ಚಮಚ ತುಪ್ಪವನ್ನು ಕಾಯಿಸಿ ಅದಕ್ಕೆ ಒಂದು ಇಡೀ ನೀರುಳ್ಳಿಯ ಹೋಳುಗಳನ್ನು ಹಾಕಿ ಬೇಯಿಸಿ.ಅದು ಕಂದು ಬಣ್ಣಕ್ಕೆ ತಿರುಗುವಾಗ ಒಲೆಯಿಂದ ತೆಗೆದಿಡಿ.

ಸ್ವಲ್ಪ ತುಪ್ಪದಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹುರಿದಿಡಿ. ಇನ್ನು ಸ್ಪಲ್ಪ ತುಪ್ಪದೊಂದಿಗೆ ಶುಂಠಿ,ಬೆಳ್ಳುಳ್ಳಿ,ಏಲಕ್ಕಿ, ದಾಲ್ಚೀನಿಯನ್ನು ಹದವಾಗಿ ಹುರಿಯಿರಿ.ಇನ್ನುಳಿದ ನೀರುಳ್ಳಿ ಹೋಳುಗಳನ್ನು ಅದರೊಂದಿಗೆ ಬೆರೆಸಿ ಕೈಬಿಡದಂತೆ ಹುರಿಯುತ್ತಾ ಇರಿ.ಇದಕ್ಕೆ ಅಕ್ಕಿಯನ್ನು ಹಾಕಿ ನೀರನ್ನು ಸೇರಿಸಿ10 ನಿಮಿಷಗಳ ಕಾಲ ಬೇಯಿಸಿ.

ನೀರು ಕುದಿಯಲು ಪ್ರಾರಂಭವಾದಾಗ ಉಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ಪಾತ್ರೆಯಲ್ಲಿನ ಅಕ್ಕಿ ಬೆಂದು ಅದರ ನೀರು ಪೂರ್ತಿ ಆವಿಯಾದ ನಂತರ ಒಲೆಯಿಂದ ಕೆಳಗಿಳಿಸಿ, ಹುರಿದಿಟ್ಟ ನೀರುಳ್ಳಿ, ಗೋಡಂಬಿ, ಒಣದ್ರಾಕ್ಷಿಗಳನ್ನು ಬೆರೆಸಿ, ಬಿಸಿಯಾಗಿ ಬಡಿಸಿ.

ವೆಬ್ದುನಿಯಾವನ್ನು ಓದಿ