ಬೇಕಾಗುವ ಸಾಮಾಗ್ರಿಗಳು: ತೊಗರಿ ಬೇಳೆ - ಅರ್ಧ ಕಪ್ ತುರಿದ ತೆಂಗಿನಕಾಯಿ - ಒಂದು ಸಣ್ಣ ಕಪ್ ಹಸಿಮೆಣಸಿನಕಾಯಿ - 3-4 ಕೊತ್ತಂಬರಿ ಬೀಜ - ಅರ್ಧ ಕಪ್ ಕೊತ್ತಂಬರಿ ಸೊಪ್ಪು - ಅರ್ಧ ಕಟ್ಟು ಜೀರಿಗೆ - 3-4 ಚಮಚ ಇಂಗು - 1 ಚಿಟಿಕೆ ನೀರುಳ್ಳಿ - 1 ಹುಣಸೇಹಣ್ಣಿನ ನೀರು - 3-4 ಚಮಚ ಉಪ್ಪು - ರುಚಿಗೆ ತಕ್ಕಷ್ಟು ಬೇವಿನ ಎಲೆಗಳು
ಪಾಕ ವಿಧಾನ: ಮೊದಲಿಗೆ ತೊಗರಿ ಬೇಳೆಯನ್ನು ಚೆನ್ನಾಗಿ ಬೇಯಿಸಿ. ನೀರುಳ್ಳಿ ಬಿಟ್ಟು ಉಳಿದೆಲ್ಲವುಗಳನ್ನು ಚೆನ್ನಾಗಿ ರುಬ್ಬಿರಿ.
ನೀರುಳ್ಳಿಯನ್ನು ಹೊಂಬಣ್ಣ ಬರುವವರೆಗೆ ಹುರಿದು ಇದಕ್ಕೆ ಬೇಯಿಸಿದ ತೊಗರಿಬೇಳೆಯನ್ನು ಮತ್ತು ಹುಣಸೇಹಣ್ಣಿನ ರಸವನ್ನು ಸೇರಿಸಿ.
ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ ಹತ್ತು ನಿಮಿಷ ಚೆನ್ನಾಗಿ ಕುದಿಸಿ.ಅನ್ನದೊಂದಿಗೆ ತಿನ್ನಲು ರುಚಿಯಾಗಿರುತ್ತದೆ.