ಬೇಕಾಗುವ ಸಾಮಾಗ್ರಿಗಳು: ಬಾಳೆಹಣ್ಣು ತುಂಡುಗಳು - ಅರ್ಧ ಕಪ್ ತುರಿದ ಕೆಂಗಿನಕಾಯಿ - ಅರ್ಧ ಕಪ್ ಸಣ್ಣಗೆ ಹೆಚ್ಚಿದ ನೀರುಳ್ಳಿ - ಅರ್ಧ ಕಪ್ ಹಸಿಮಣಸಿನಕಾಯಿ - 2 ನಿಂಬೆರಸ - 2 ಚಮಚ ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರಣೆಗೆ: ಸಾಸಿವೆ - ಅರ್ಧ ಚಮಚ ಒಳ್ಳೆ ಮೆಣಸು - 4 ಜೀರಿಗೆ - ಸ್ವಲ್ಪ ತುಪ್ಪ - 1 ಚಮಚ
ಪಾಕ ವಿಧಾನ: ತುಂಡುಮಾಡಿದ ಬಾಳೆಹಣ್ಣನ್ನು ಚೆನ್ನಾಗಿ ಹುರಿಯಿರಿ.
ಹುರಿದ ಬಾಳೆಹಣ್ಣಿಗೆ ಶುಂಠಿ ಚೂರುಗಳು, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ನೀರುಳ್ಳಿ, ಉಪ್ಪು, ಮತ್ತು ತೆಂಗಿನ ಹಾಲನ್ನು ಒಟ್ಟಿಗೆ ಬೆರೆಸಿ ಬೇಯಿಸಿ.ಚೆನ್ನಾಗಿ ಬೆಂದ ಮೇಲೆ ಒಗ್ಗರಣೆ ಹಾಕಿ.