ವೆಡ್ಪು

ಬೇಕಾಗುವ ಸಾಮಾಗ್ರಿಗಳು:

ಬಟಾಟೆ - 4
ಕೆಂಪು ಮೆಣಸಿನ ಪುಡಿ - 2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಸಾಸಿವೆ ಮತ್ತು ಜೀರಿಗೆ - ಸ್ವಲ್ಪ

ಪಾಕ ವಿಧಾನ:

ಬಟಾಟೆಯ ಸಿಪ್ಪೆ ತೆಗೆದು, ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ.ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಜೀರಿಗೆ ಮತ್ತು ತುಂಡುಮಾಡಿದ ಬಟಾಟೆಯನ್ನು ಹಾಕಿರಿ.ಬೆಂಕಿಯನ್ನು ಕಡಿಮೆಗೊಳಿಸದೆ ಕಲಸುತ್ತಾ ಇರಿ.ಬಟಾಟೆಯು ಅರ್ಧ ಹುರಿದ ಕೂಡಲೇ, ಉಪ್ಪು ಮತ್ತು ಮೆಣಸಿನ ಹುಡಿ ಹಾಕಿ ಮತ್ತೆ ಐದು ನಿಮಿಷ ಸಣ್ಣ ಉರಿಯಲ್ಲಿಟ್ಟು ನಂತರ ಕೆಳಗಿಳಿಸಿ.

ವೆಬ್ದುನಿಯಾವನ್ನು ಓದಿ