ಜಗತ್ತಿನ ಶ್ರೀಮಂತರಲ್ಲಿ 3 ಭಾರತೀಯ ಮಹಿಳೆಯರು

ಶುಕ್ರವಾರ, 7 ಮಾರ್ಚ್ 2008 (15:38 IST)
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮುಂದಿರುವಂತೆಯೇ ಜಗತ್ತಿನ ಶ್ರೀಮಂತರಲ್ಲಿ ಮೂವರು ಭಾರತೀಯ ಮಹಿಳೆಯರು ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಜಿಂದಾಲ್ ಸಮೂಹದ ಸಾವಿತ್ರಿ ಜಿಂದಾಲ್ 8.2 ಬಿಲಿಯನ್ ಡಾಲರ್‌, ಬೆನೆಟ್ಟ್ ಕೊಲಮನ್‌ ಮುಖ್ಯಸ್ಥೆ ಇಂದು ಜೈನ್ 4.4 ಬಿಲಿಯನ್ ಡಾಲರ್,ಥರ್ಮ್ಯಾಕ್ಸ್ ಗ್ರುಪ್‌ನ ಅನು ಆಗಾ 1.1 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ ಮೂವರು ಭಾರತೀಯ ಮಹಿಳೆಯರಾಗಿದ್ದಾರೆ.

ಫ್ರಾನ್ಸ್‌ನ ಲೈಲಿನ್ಸ್ ಬೆಟ್ಟನ್ ಕೋರ್ಟ್ ಜಗತ್ತಿನ ಶ್ರೀಮಂತ ಮಹಿಳೆಯಾಗಿದ್ದು, 22.9 ಬಿಲಿಯನ್ ಡಾಲರ್‌ಗಳ ಒಡತಿಯಾಗಿದ್ದು, ವಾರೆನ್ ಬಫೆಟ್ 62 ಬಿಲಿಯನ್ ಡಾಲರ್‌ ಆಸ್ತಿಯ ಒಡೆಯರಾಗಿ ಮೊದಲ ಸ್ಥಾನವನ್ನು ಪಡೆದಿದ್ದರೆ ಲೈಲಿನ್ಸ್ ಬೆಟ್ಟನ್ ಕೋರ್ಟ್ ಜಗತ್ತಿನ ಶ್ರೀಮಂತರಲ್ಲಿ 17ನೇಯ ಸ್ಥಾನವನ್ನು ಪಡೆದಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಬಿಲಿಯನೇರ್ ಸ್ಥಾನವನ್ನು ಅಲಂಕರಿಸಿದ 1,125 ಸದಸ್ಯರಿದ್ದು, ಸಾವಿತ್ರಿ ಜಿಂದಾಲ್ 110ನೇಯ ಸ್ಥಾನವನ್ನು ಪಡೆದಿದ್ದಾರೆ.ಇಂದು ಜೈನ್ 236ನೇಯ ಸ್ಥಾನವನ್ನು ಪಡೆದಿದ್ದು,ಅನು ಆಗಾ 1,014ಸ್ಥಾನವನ್ನು ತಲುಪಿದ್ದಾರೆ.

ವೆಬ್ದುನಿಯಾವನ್ನು ಓದಿ