ನಗರದ ವಿಒಸಿ ಕ್ರೀಡಾಂಗಣದಲ್ಲಿ ನಡೆದ ಅಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಬಾಬಾ ರಾಮದೇವ್ ಮತ್ತು ಈಶಾ ಸಂಸ್ಥೆಯ ಸದ್ಗುರು, ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಹಿತವಚನಗಳನ್ನು ನೀಡಿದರು.
ಸಮಾಜದ ಪ್ರಮುಖ ವಾಹಿನಿಗೆ ಸಾಮಾಜಿಕ ಅಧ್ಯಾತ್ಮಿಕತೆಯ ಪರಿಚಯ ನೀಡುವುದು ಅಗತ್ಯವಾದ ಹಿನ್ನೆಲೆಯಲ್ಲಿ, ಭಾಬಾ ರಾಮದೇವ್ ಬೆಳಿಗ್ಗೆ 5 ಗಂಟೆಯಿಂದ 7.30 ಗಂಟೆಯವರೆಗೆ ಉಚಿತ ಯೋಗಾ ಶಿಬಿರವನ್ನು ನಡೆಸಿಕೊಟ್ಟರು.
ಯೋಗಾ ಅವಧಿ ಮುಕ್ತಾಯದ ನಂತರ ಮಾತನಾಡಿದ ಸದ್ಗುರುಗಳು, ಯೋಗಾ ಹೆಸರಿನ ಬಗ್ಗೆ ಅರಿವಿಲ್ಲದ ಜನ ಸಾಮಾನ್ಯರಿಗೆ ಕೂಡಾ ಯೋಗದ ಮಹತ್ವವನ್ನು ಪರಿಚಯಿಸಿರುವುದು ಅದ್ಭುತ ಕಾರ್ಯವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಧ್ಯಾತ್ಯಕತೆಯ ಅಗತ್ಯವಿದೆ ಎಂದು ಹೇಳಿದರು.
ಈಶಾ ಸಂಸ್ಥೆಯಿಂದ ಇಂಪಾದ ಸಂಗೀತದ ಹರಿವಿನಿಂದಾಗಿ ಕಾರ್ಯಕ್ರಮಕ್ಕೆ ಮತ್ತೊಂದು ಕಳೆಯನ್ನು ತಂದುಕೊಟ್ಟಿತು. ಸಾವಿರಾರು ಸಂಖ್ಯೆಯಲ್ಲಿದ್ದ ಜನರು ಕಾರ್ಯಕ್ರಮದಲ್ಲಿ ಸಂತಸದಿಂದ ಪಾಲ್ಗೊಂಡು ಯೋಗಾ ಶಿಬಿರದ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮ ಅಸ್ಥಾ ಚಾನೆಲ್ನಲ್ಲಿ ಪ್ರಸಾರವಾಗಲಿದೆ.