ಯೋಗ ಮಾಡುವ ಮೊದಲು ನೀರು, ಆಹಾರ ಸೇವಿಸಬಹುದೇ

Krishnaveni K

ಗುರುವಾರ, 14 ಮಾರ್ಚ್ 2024 (12:03 IST)
ಬೆಂಗಳೂರು: ಯೋಗಾಸನ ಮಾಡುವ ಮೊದಲು ನಾವು ಯಾವ ಆಹಾರ ಕ್ರಮ ಅನುಸರಿಸಬೇಕು ಎಂಬ ಅನುಮಾನ ಅನೇಕರಿಗಿರುತ್ತದೆ. ನೀರು ಸೇವಿಸಬಹುದೇ? ಆಹಾರ ಸೇವಿಸಬಹುದೇ ಎಂಬಿತ್ಯಾದಿ ಗೊಂದಲಗಳಿಗೆ ಇಲ್ಲಿದೆ ಪರಿಹಾರ.

ಯೋಗಾಸನ ಮಾಡುವುದು ಎಂದರೆ ದೇಹಕ್ಕೆ ಚಟುವಟಿಕೆ ನೀಡಲೇಬೇಕಾಗುತ್ತದೆ. ಮೈ ಬಗ್ಗಿಸಿ ಯೋಗ ಮಾಡುವಾಗ ಹೊಟ್ಟೆ ತುಂಬಾ ಆಹಾರ ಅಥವಾ ನೀರು ಕುಡಿಯಲು ಸಾಧ‍್ಯವಾಗದು. ಹೀಗೆ ಮಾಡಿದರೆ ಸರಿಯಾದ ರೀತಿಯಲ್ಲಿ ಯೋಗಾಸನ ಮಾಡಲು ಸಮಸ್ಯೆಯಾಗಬಹುದು. ಹಾಗಾಗಿ ಯೋಗಾಸನ ಮಾಡುವ ಮೊದಲು ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ.

ಯೋಗಾಸನ ಮಾಡುವ ಮೊದಲು ನೀರು ಕುಡಿಯಬಹುದೇ ಎಂಬ ಅನುಮಾನ ಅನೇಕರಿಗಿರುತ್ತದೆ. ಆದರೆ ಒಂದು ವಿಚಾರ ನೆನಪಿರಲಿ, ನೀರು ಕುಡಿಯಲೇ ಬೇಕೆಂದಿದ್ದರೆ ಯೋಗಾಸನ ಮಾಡುವ 10 ರಿಂದ 15 ನಿಮಿಷ ಮೊದಲು ಕುಡಿಯಿರಿ. ಬಳಿಕ ಖಾಲಿ ಹೊಟ್ಟೆಯಲ್ಲಿರುವುದು ಸೂಕ್ತ.

ಅದೇ ರೀತಿ ಅಹಾರ ತೆಗೆದುಕೊ‍ಳ್ಳುವ ವಿಚಾರದಲ್ಲೂ ಕಟ್ಟುನಿಟ್ಟಿರಲಿ. ಯೋಗಾಸನ ಮಾಡುವ ಮೊದಲು ಖಡಾಖಂಡಿತವಾಗಿ ಹೊಟ್ಟೆ ತುಂಬಾ ಆಹಾರ ಸೇವಿಸಿರಬಾರದು. ಅರ್ಧ ಗಂಟೆ ಮೊದಲು ಲೈಟ್ ಫುಡ್ ತೆಗೆದುಕೊಳ್ಳಬಹುದು. ಅದೂ ಹಾಳು-ಮೂಳು ತಿನ್ನುವುದಲ್ಲ. ದೇಹಕ್ಕೆ ಶಕ್ತಿ ಕೊಡುವಂತಹ ಆರೋಗ್ಯಕರ ಆಹಾರ ಮಾತ್ರ ಸೇವಿಸಬಹುದು. ಇಲ್ಲದೇ ಹೋದರೆ ಯೋಗ ಮಾಡಲು ಕಷ್ಟವಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ