ಮೈಮನಗಳ ವಿಶ್ರಾಂತಿಗೆ ಮಕರಾಸನ

ಸಂಸ್ಕೃತದಲ್ಲಿ ಮಕರ ಅಂದರೆ ಮೊಸಳೆ. ಈ ಮಕರಾಸನದ ಅಭ್ಯಾಸವು ಮೈ ಮನಸುಗಳನ್ನು ಸಂಪೂರ್ಣ ಶಾಂತವಾಗಿ ಮತ್ತು ಸಡಿಲವಾಗಿಸಲು ಸಹಾಯ ಮಾಡುತ್ತದೆ.

ಮಕರಾಸನದ ವಿಧಾನಗಳು
ನೆಲದ ಮೇಲೆ ಹಾಸಿದ ಚಾಪೆ ಅಥವಾ ಬಟ್ಟೆಯ ಮೇಲೆ ಕವಚಿ ಮಲಗಿ. ನಿಮ್ಮ ಕಿಬ್ಬೊಟ್ಟೆ, ಎದೆ, ಮತ್ತು ಗಲ್ಲಗಳು ನಿಮ್ಮ ವ್ಯಾಯಾಮ ಚಾಪೆಯನ್ನು ತಾಕುತ್ತಿರಬೇಕು. ಕಾಲುಗಳನ್ನು ನೆಟ್ಟಗೆ ನೀಡಿ. ಕೈಗಳು ಎರಡೂ ಬದಿಗಳಲ್ಲಿರಲಿ. ಕಾಲುಗಳು ನೆಲದ ಮೇಲೆ ಸಂಪೂರ್ಣವಾಗಿ ವಿಶ್ರಾಂತವಾಗುವಂತೆ ಆರಾಮವಾಗಿ ಅಗಲಿಸಿಡಿ. ಕಾಲಿನ
WD
ಹಿಮ್ಮಡಿಗಳು ಪರಸ್ಪರ ಅಭಿಮುಖವಾಗಿರಲಿ. ಪಾದದ ತುದಿಯು ನೆಲವನ್ನು ತಾಕುತ್ತಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಕಾಲ್ಬೆರಳುಗಳು ಹೊರಚಾಚಿರಲಿ. ಈಗ ನಿಮ್ಮ ತಲೆ ಮತ್ತು ದೇಹವನ್ನು ನೆಲದಿಂದ ಮೇಲೆತ್ತಿ. ಚಿತ್ರದಲ್ಲಿರುವಂತೆ ಬಲಗೈಯನ್ನು ನಿಮ್ಮ ಎಡಭುಜದ ಕೆಳಗಡೆ ತನ್ನಿ. ನಿಮ್ಮ ಬಲಗೈಮೂಲಕ ಎಡಭುಜವನ್ನು ಹಗುರವಾಗಿ ಮುಷ್ಟಿಯಲ್ಲಿ ಹಿಡಿಯಿರಿ.


ಎಡಗೈಯನ್ನು ಬಲಭುಜದ ಮೇಲಿರಿಸಿ. ನಿಮ್ಮ ಎಡಗೈ ಮೂಲಕ ಬಲ ಭುಜವನ್ನು ಹಗುವಾಗಿ ಹಿಡಿಯಿರಿ. ಈ ಭಂಗಿಯಲ್ಲಿ ಮಡಚಿದ ಮೊಣಕೈಗಳ ಮೂಲಕ ಒಂದರ ಮೇಲೊಂದರಂತೆ ಎರಡು ತ್ರಿಕೋನಗಳು ಉಂಟಾಗುತ್ತವೆ. ನಿಮ್ಮ ಮುಂತೋಳು ಸಹ ಮೇಲ್ತೋಳುವಿನ ಅಡ್ಡವಾಗುತ್ತದೆ. ಈ ಎರಡು ತ್ರಿಕೋನಗಳ ಮೇಲೆ ನಿಮ್ಮ ಹಣೆಯನ್ನಿರಿಸಿ. ಕಣ್ಣುಗಳನ್ನು ಹಗುರವಾಗಿ ಮುಚ್ಚಿ ವಿಶ್ರಾಂತಿ ಪಡೆಯಿರಿ.

ಕಿಬ್ಬೊಟ್ಟೆಯಿಂದ ಉಸಿರಾಡಿ, ಅಥವಾ ಉಸಿರಾಡಲು ಪ್ರಯತ್ನಿಸಿ. ನಿಮಗೆ ಅನುಕೂಲವೆನಿಸುವಷ್ಟು ಹೊತ್ತು ಇದೇ ಭಂಗಿಯಲ್ಲಿರಿ. ನಿಧಾನಕ್ಕೆ ಮೊದಲಿನ ಸ್ಥಿತಿಗೆ ಮರಳಿ.

ಅನುಕೂಲಗಳು
ಈ ಆಸನದ ಅಭ್ಯಾಸವು ಕರುಳು ಮತ್ತು ಜಠರದಲ್ಲಿ ವಾಯು ತುಂಬುವಿಕೆಯನ್ನು ತಡೆಯುತ್ತದೆ. ಸಣ್ಣಕರುಳು ಹೆಚ್ಚು ಶಕ್ತವಾಗುತ್ತದೆ. ಇದು ಪಚನ ಕ್ರಿಯೆ ಪ್ರಕ್ರಿಯೆಯನ್ನೂ ಉತ್ತಮ ಪಡಿಸುತ್ತದೆ. ಹೈ ಬ್ಲಡ್ ಪ್ರೆಶರ್ ಇಳಿಕೆಗೂ ಸಹಕಾರಿ. ಮೂತ್ರಕೋಶ ಹಾಗೂ ಇನ್ನಿತರ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳೂ ಸಹ ಪರಿಹಾರವಾಗುತ್ತವೆ. ಯಾವುದಾದರೂ ಶ್ರಮದ ಕೆಲಸ ಮಾಡಿದ ಬಳಿಕ ಅಥವಾ ಶ್ರಮದ ಕಠಿಣ ಆಸನ ಹಾಕಿದ ಬಳಿಕ ಈ ಆಸನದ ಅಭ್ಯಾಸ ನಡೆಸುವುದು ಅತ್ಯುತ್ತಮ.

ವೆಬ್ದುನಿಯಾವನ್ನು ಓದಿ