ಶವಾಸನ

ಸಂಸ್ಕೃತದಲ್ಲಿ ಶವ ಮತ್ತು ಆಸನ ಅಂದರೆ 'ಮೃತದೇಹ' ಮತ್ತು 'ವ್ಯಾಯಾಮ' ಎಂದರ್ಥ. ಹಾಗಾಗಿ ಶವಾಸನ ಮಾಡುವ ಯೋಗಿಯು ನೆಲದ ಮೇಲೆ ಶವದಂತೆ ಅಂಗಾತ ಮಲಗುವ ಅವಶ್ಯಕತೆ ಇದೆ. ಈ ಆಸನದ ಮೂಲಕ ಯೋಗಿಯೊಬ್ಬನಿಗೆ ನಿಜವಾದ ವಿಶ್ರಾಂತಿ ಅಂದರೇನು ಎಂಬುದರ ಅರಿವಾಗುತ್ತದೆ.

ವಿಧಾನ

ಸಮತಟ್ಟಾದ ಜಾಗದಲ್ಲಿ ನಿಮ್ಮ ದೇಹದುದ್ದದ ಚಾಪೆ ಅಥವಾ ಜಮುಖಾನ ಹಾಸಿ, ಉದ್ದಕ್ಕೆ ನಿರಾಳವಾಗಿ ಮಲಗಿ.

ಕಾಲುಗಳ ನಡುವೆ ಅಂತರವಿರಲಿ ಮತ್ತು ಮೊಣಕಾಲುಗಳು ಬಾಗಿರಲಿ.

ಕೈಗಳನ್ನು ಅಗಲಕ್ಕೆ ನಿಮ್ಮೆರಡೂ ತೊಡೆಗಳ ಪಕ್ಕ ಅಗಲಕ್ಕೆ ಮೇಲ್ಮುಖವಾಗಿ ಚಾಚಿ.

ಕೈಬೆರಳುಗಳನ್ನು ಮೇಲ್ಮುಖವಾಗಿ ಚಮಚೆಯಾಕಾರಕ್ಕೆ ಕೊಂಚ ಬಾಗಿಸಿ ಮೇಲ್ಮುಖವಾಗಿಸಿ.

ಬಾಯಿ ಬಿಟ್ಟಿರಲಿ. ಕೆಳ ಮತ್ತು ಮೇಲಿನ ಹಲ್ಲುಗಳ ನಡುವೆ ಒಂದಿಷ್ಟು ಅಂತರವಿರಲಿ.

ಕಣ್ಣುಗಳನ್ನು ಸಡಿಲವಾಗಿ ಮುಚ್ಚಿ.

ಕಣ್ಣುಗುಡ್ಡೆಗಳು ನಿಶ್ಚಲವಾಗಿರಬೇಕು.

ಮನಸ್ಸು ಶಾಂತವಾಗಿರಲಿ.

ಮೂಗಿನಿಂದ ನಿಧಾನವಾಗಿ ಉಸಿರಾಡುತ್ತಾ ವಿಶ್ರಾಂತಿ ಪಡೆಯಿರಿ.

ವಿಶ್ರಾಂತಿ ಪಡೆಯುವಾಗ ನೀವು ನಿಮ್ಮ ಮನಸ್ಸು ಮತ್ತು ದೇಹದಿಂದ ದೂರ ಸಾಗಿ.

ಯಾವುದೂ ನಿಮ್ಮ ಅರಿವಿಗೆ ಬರದಿರುವ ಕ್ಷಣವೇ ವಿಶ್ರಾಂತಿಯ ಪರಿಪೂರ್ಣ ಹಂತ

WD
ಯಾವ ಅನುಭವ ಇಲ್ಲ, ಏನೂ ಕೇಳಿಸುತ್ತಿಲ್ಲ, ನಿಮ್ಮ ಮನಸ್ಸು ಯಾವುದನ್ನೂ ಗಮನಿಸುತ್ತಿಲ್ಲ ಮತ್ತು ನೀವು ಸಂಪೂರ್ಣ ಶೂನ್ಯ ಸ್ಥಿತಿಗೆ ತಲುಪುತ್ತೀರಿ ಎಂಬ ಭಾವನೆಯಿರಲಿ.

ಪ್ರಯೋಜನಗಳು

ಮನಸ್ಸು ಶಾಂತವಾಗುತ್ತದೆ

ಮಾನಸಿಕ ಗ್ರಹಿಕೆ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಶಾಂತವಾಗಿರುತ್ತೀರಿ

ನಿಮ್ಮ ಭಾವನೆಗಳ ಮೇಲೆ ಹತೋಟಿ ಸಾಧಿಸುತ್ತೀರಿ

ಮನಸ್ಸು ಮತ್ತು ದೇಹದ ಮೇಲೆ ಸ್ವಾಭಾವಿಕ ಹೊಂದಾಣಿಕೆಯುಂಟಾಗುತ್ತದೆ

ಒತ್ತಡವನ್ನು ನಿಯಂತ್ರಿಸುವ ನಿಮ್ಮ ಸಾಮರ್ಥ್ಯ ಹೆಚ್ಚುತ್ತದೆ

ಕೆಲಸ ಮತ್ತು ವಿಶ್ರಾಂತಿಯ ಮೇಲೆ ಸಮತೋಲನ ಸಾಧಿಸುತ್ತದೆ.

ವಿಶ್ರಾಂತಿ ರಹಿತ ಚಡಪಡಿಕೆಯನ್ನು ಹತ್ತಿಕ್ಕುತ್ತದೆ.

ಚಡಪಡಿಕೆ ಆತಂಕ, ಭಯ, ಉದ್ವೇಗವನ್ನು ಶವಾಸನ ತೊಡೆದು ಹಾಕುತ್ತದೆ

ಇಚ್ಛಾಶಕ್ತಿಯನ್ನು ಹೆಚ್ಚಿಸುತ್ತದೆ.

ದೇಹ ಮತ್ತು ಮನಸ್ಸಿಗೆ ಲವಲವಿಕೆ ನೀಡುತ್ತದೆ

ಯಾವುದೇ ಆಸನವನ್ನು ಮುಗಿಸುವ ವೇಳೆಗೆ ಶವಾಸನ ಹಾಕುವುದು ಅತ್ಯುತ್ತಮ.

ಗಮನಿಸಿ

ನಿಮ್ಮ ಉಸಿರಾಟ ನಿಧಾನವಾದಂತೆ, ನಿಮ್ಮ ಮನಸ್ಸೂ ಸ್ಥಿರಗೊಳ್ಳುತ್ತದೆ ಹಾಗೂ ಎಲ್ಲಾ ಮಾನಸಿಕ ಚಟುವಟಿಕೆಗಳು ನಿಲುಗಡೆಯಾಗುತ್ತದೆ.

ಮೃತದೇಹದಂತೆ ನಿಶ್ಚಲವಾಗಿ ಮಲಗಿ.

ಸಂಪೂರ್ಣ ದಣಿವಾರುವ ತನಕ ಇದೇ ಭಂಗಿಯಲ್ಲಿರಿ.

ಇದು ಕೆಲವು ನಿಮಿಷಗಳಿಂದ ಅರ್ಧಗಂಟೆ ಕಾಲವೂ ಮುಂದುವರಿಯಬಹುದು.

ವೆಬ್ದುನಿಯಾವನ್ನು ಓದಿ