ತಲೆಯ ಮೇಲೆ ಪೂರ್ತಿ ಭಾರ ಹಾಕಿ ನಿಲ್ಲುವ ಭಂಗಿಗೆ ಸಂಸ್ಕೃತದಲ್ಲಿ ಶೀರ್ಷಾ ಎಂದು ಕರೆಯುತ್ತಾರೆ. ಹೀಗಾಗಿ ಈ ಆಸನಕ್ಕೆ ಶೀರ್ಷಾಸನ ಎಂಬ ಹೆಸರು ಬಂದಿದೆ.
ವಿಧಾನ
WD
ಮೊದಲಿಗೆ ಮಂಡಿಯೂರಿ ಕುಳಿತುಕೊಳ್ಳಿ. ನಂತರ ಮುಂದಕ್ಕೆ ಬಾಗಿ, ಮೊಣಕೈಯನ್ನು ನೆಲದಲ್ಲಿರಿಸಿ. ತಲೆಯನ್ನು ನೆಲದಲ್ಲಿರಿಸಿ, ಕೈಬೆರಳುಗಳನ್ನು ಒಂದಕ್ಕೊಂದು ಜೋಡಿಸಿ, ಇದನ್ನು ತಲೆಯ ಹಿಂಭಾಗದಲ್ಲಿರಿಸಿ.
ನಂತರ, ಮೊಣಕಾಲುಗಳನ್ನು ನೇರವಾಗಿಸಿ, ಪೃಷ್ಠದ ಭಾಗವನ್ನು ಮೇಲಕ್ಕೆತ್ತಿ. ಇದು ಇಂಗ್ಲೀಷಿನ ವಿ ಆಕೃತಿಯಲ್ಲಿರುತ್ತದೆ. ನಂತರ ಕಾಲುಗಳನ್ನು ನಿಧಾನವಾಗಿ ಬಾಗಿಸುತ್ತಾ ಸಂಪೂರ್ಣ ತಲೆಯ ಮೇಲೆ ಭಾರ ಹಾಕಿ ನಿಲ್ಲಿ.
ಇದೇ ಭಂಗಿಯಲ್ಲಿ ಕೆಲವು ಸೆಕೆಂಡುಗಳ ಕಾಲ ನಿಂತು, ನಂತರ ಮೊಣಕಾಲುಗಳನ್ನು ಬಾಗಿಸಿ, ವಜ್ರಾಸನವನ್ನು ಮಾಡಿ. ನಂತರ, ಪ್ರಾರಂಭಿಕ ಭಂಗಿಗೆ ಮರಳಿ.
ಮುನ್ನೆಚ್ಚರಿಕೆಗಳು ನೀವು ಹೊಸದಾಗಿ ಯೋಗಾಭ್ಯಾಸವನ್ನು ಮಾಡುತ್ತಿದ್ದಲ್ಲಿ, ಈ ಆಸನವನ್ನು ಗೋಡೆಯನ್ನು ಆಸರೆಯಾಗಿಸಿ ಮಾಡಿ. ಅಥವಾ ಉತ್ತಮ ಯೋಗ ಗುರುಗಳ ಸಲಹೆಯಂತೆಯೇ ಮಾಡಿ. ಸೆಳೆತದೊಂದಿಗೆ ಕಾಲನ್ನು ಮೇಲಕ್ಕೆತ್ತಬೇಡಿ.
ಪ್ರಾರಂಭಿಕ ಭಂಗಿಗೆ ಮರಳುವಾಗ, ಸೆಳೆತದೊಂದಿಗೆ, ನಿಮ್ಮ ಕಾಲುಗಳನ್ನು ನೆಲದಲ್ಲಿಡಬೇಡಿ. ಸ್ವಲ್ಪ ಹೊತ್ತು, ಒಂದಕ್ಕೊಂದು ಕೂಡಿಸಿದ ಕೈಬೆರಳುಗಳನ್ನು ತಲೆಯ ಹಿಂಭಾಗದಲ್ಲಿರಿಸಿ, ನಂತರ ವಜ್ರಾಸನ ಭಂಗಿಗೆ ಮರಳಿ.
ಉದರ ಅಥವಾ, ಬೆನ್ನುಮೂಳೆ ಸಂಬಂಧಿ ರೋಗಗಳಿಂದ ಬಳಲುತ್ತಿರುವವರು ಈ ಆಸನವನ್ನು ಅಭ್ಯಸಿಸುವುದು ಸೂಕ್ತವಲ್ಲ.
ಪ್ರಯೋಜನ ಅಜೀರ್ಣವ್ಯಾಧಿಗೆ ಈ ಆಸನವು ತುಂಬಾ ಉಪಯುಕ್ತವಾಗಿದೆ. ರಸಗ್ರಂಥಿ ಹಾಗೂ ಹೃದಯ ಸ್ನಾಯುಗಳ ಕಾರ್ಯನಿರ್ವಹಣೆಯನ್ನು ಇದು ಚುರುಕುಗೊಳಿಸುತ್ತದೆ. ಈ ಆಸನದಲ್ಲಿ ರಕ್ತದ ಪ್ರವಾಹವು ಮೆದುಳಿನ ಕಡೆಗಿರಿಸುವುದರಿಂದ, ಮೆದುಳಿನ ನೆನಪಿನ ಮತ್ತು ಗ್ರಹಣ ಶಕ್ತಿಯ ಪ್ರಕ್ರಿಯೆಯನ್ನು ವೃದ್ಧಿಗೊಳಿಸಿ, ದೇಹದಲ್ಲಿ ಆತ್ಮವಿಶ್ವಾಸ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ.