ಸಂಸ್ಕೃತದಲ್ಲಿ ತಾಡಾ ಎಂದರೆ ಪರ್ವತ ಎಂದರ್ಥ. ಈ ಭಂಗಿಗೆ ಸಮಸ್ಥಿತಿ ಆಸನ ಅಂತಲೂ ಕರೆಯುತ್ತಾರೆ. ಸಮ ಅಂದರೆ, ಕದಲದ ಅಥವಾ ಸಂತುಲನ ಹಾಗೂ ಸ್ಥಿತಿ ಎಂದರೆ, ದೃಢವಾಗಿ, ನೇರವಾಗಿ ನಿಲ್ಲುವುದು ಎಂದರ್ಥ. ಒಟ್ಟಾಗಿ ಸಮಸ್ಥಿತಿ ಎಂದರೆ ಕದಲದೆ ದೃಢವಾಗಿ ನಿಲ್ಲುವುದು ಎಂದರ್ಥ.
ವಿಧಾನ
• ಹಿಮ್ಮಡಿ ಮತ್ತು ಹೆಬ್ಬೆರಳು ಒಂದಕ್ಕೊಂದು ತಾಗಿರುವಂತೆ ನಿಲ್ಲಿ, ಬೆನ್ನು ನೇರವಾಗಿರಲಿ ಮತ್ತು ಅಂಗೈಯನ್ನು ಒಳಮುಖವಾಗಿರಿಸಿ ನೇರವಾಗಿ ನಿಲ್ಲಿ.
• ಮೊಣಕಾಲು, ತೊಡೆ, ಹೊಟ್ಟೆ ಮತ್ತು ಪೃಷ್ಠದ ಸ್ನಾಯುಗಳು ಬಿಗಿಯಾಗಿರುವಂತೆ ದೃಢ ಭಂಗಿಯಲ್ಲಿರಿ. ಭಾರವನ್ನು ಎರಡೂ ಪಾದಗಳಲ್ಲಿ ಸಮತೋಲನದಲ್ಲಿರಿಸಿ.
• ಮೂಗಿನ ಹೊಳ್ಳೆಗಳಿಂದ ದೀರ್ಘ ಉಸಿರನ್ನು ತೆಗೆದುಕೊಂಡು, ಬೆನ್ನು ಬಾಗುವಂತೆ ಮತ್ತು ಹೊಟ್ಟೆಯು ಮುಂದಕ್ಕೆ ಬಾಗುವಂತೆ ಕಾಲುಗಳ ಮೂಲಕ ಪೃಷ್ಠವನ್ನು ಮೇಲಕ್ಕೆತ್ತಿ ಮತ್ತು ತಲೆಯನ್ನು ಸಾಧ್ಯವಾದಷ್ಟು ಹಿಂದಕ್ಕೆ ಭಾಗಿಸಿ.
WD
ಪ್ರಯೋಜನಗಳು
• ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ನಿರ್ಲ್ಯಕ್ಷಕ್ಕೆ ಒಳಪಡುವ ಸಮಸ್ಯೆಗಳನ್ನು ತಾಡಾಸನದಿಂದ ಸುಲಭವಾಗಿ ಗುರುತಿಸಬಹುದಾಗಿದೆ.
• ಉಸಿರು, ಮನಸ್ಸು ಮತ್ತು ದೇಹವನ್ನು ನಿಶ್ಚಲ ಭಂಗಿಯಲ್ಲಿರಿಸುವ ಈ ಆಸನದಿಂದ ಬೆನ್ನು ಹುರಿಗೆ ಸಂಬಂಧಿಸಿದ ಸಮಸ್ಯೆಗಳು ವ್ಯಕ್ತವಾಗುತ್ತದೆ ಮತ್ತು ಬಾಗಿದ ಭುಜ, ಕತ್ತು ಕೆಳ ಮತ್ತು ಮೇಲಿನ ಬೆನ್ನಿನ ಬಿಗಿತ ಮುಂತಾದ ಹಲವಾರು ದೈಹಿಕ ಸಮಸ್ಯೆಗಳ ಇರುವಿಕೆಯನ್ನು ಸೂಚಿಸುತ್ತದೆ. ಮತ್ತು ಇದು ಇನ್ನಷ್ಟು ಯೋಗಾಭ್ಯಾಸದ ಆವಶ್ಯಕತೆಯನ್ನು ಸೂಚಿಸುತ್ತದೆ.
• ಇತರ ಭಂಗಿಗಳೊಂದಿಗೆ ಏಕಾಗ್ರತೆಯಿಂದ ಪ್ರತಿದಿನ ಮಾಡುವ ತಾಡಾಸನವು ಅಸಮ ಭಂಗಿಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ.
• ತಾಡಾಸನವನ್ನು ಸರಿಯಾಗಿ ಮತ್ತು ಏಕಾಗ್ರತೆಯಿಂದ ಮಾಡಿದಲ್ಲಿ, ದೇಹವು ಭೂಮಿಯಲ್ಲಿ ದೃಢವಾಗಿ ನಿಂತಿರುವ ಅನುಭವವಾಗುತ್ತದೆ.