ಯುಗ ಯುಗಾದಿ ಕಳೆದರೂ... ಯುಗಾದಿ ಮರಳಿ ಬಂದಿದೆ

ಯುಗಾದಿ ಹಬ್ಬ ಬಂತೆಂದರೆ, ಯುಗ ಯುಗಾದಿ ಕಳೆದರೂ... ಎಂಬ ಹಾಡು ಅನುರಣಿಸದೇ ಇರುವ ಕನ್ನಡ ಮನಸುಗಳೇ ಇಲ್ಲವೆನ್ನಬಹುದೇನೋ... ಅಷ್ಟರಮಟ್ಟಿಗೆ ಈ ಹಾಡು, ತನ್ನ ಮನಮುಟ್ಟುವ ಸಾಹಿತ್ಯ, ಜೀವನದ ಸೊಗಸನ್ನು ಕೆಲವೇ ಅಕ್ಷರಗಳಲ್ಲಿ ಹಿಡಿದಿಡಬಲ್ಲ ತಾಕತ್ತಿನಿಂದ ಅಚ್ಚಳಿಯದೆ ನಿಂತುಬಿಟ್ಟಿದೆ.

ಕವಿ: ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ಅಂಬಿಕಾತನಯದತ್ತ)

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆನೆಯು
ಅಖಿಲ ಜೀವ ಜಾತಕೆ
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೋ..

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ವೆಬ್ದುನಿಯಾವನ್ನು ಓದಿ