ವೆಬ್‌ದುನಿಯಾದಲ್ಲಿ ನಿಮ್ಮದೇ ಪೋರ್ಟಲ್ ರಚಿಸಿ

ಮನದಲ್ಲಿ ಆಗಾಗ್ಗೆ ಧುತ್ತನೆ ಮೂಡಿ ಮರೆಯಾಗುತ್ತಿರುವ ಯೋಚನೆಗಳನ್ನು ಹಿಡಿದಿಡಲು ಬ್ಲಾಗು ಎಂಬುದೊಂದು ವೇದಿಕೆ ಇಂದು ಜನಜನಿತ. ಅಕ್ಷರಗಳ ಅಕ್ಕರೆಯ ಜಗತ್ತು ಸೃಷ್ಟಿಸುವುದಕ್ಕಾಗಿಯೇ ಬ್ಲಾಗಿಗಿಂತಲೂ ಹೆಚ್ಚು ಅವಕಾಶಗಳು, ಸಾಧ್ಯತೆಗಳಿರುವ, ನಿಮ್ಮದೇ ಪುಟ್ಟ ತಾಣವೊಂದನ್ನು ನೀವು ಹೊಂದಬಹುದು. ಅದೂ ಉಚಿತವಾಗಿ.

ಅಂತರ್ಜಾಲದಲ್ಲಿ ನಿಮ್ಮದೇ ಒಂದು ಪೋರ್ಟಲ್ ಇದ್ದರೆ ಹೇಗೆ ಎಂಬ ಆಲೋಚನೆಯಲ್ಲಿರುವವರಿಗೆ ವೆಬ್‌ದುನಿಯಾ ಸಹಾಯ ಮಾಡುತ್ತದೆ. ಈಗಾಗಲೇ ನಿಮ್ಮದೇ ಭಾಷೆಯಲ್ಲಿ ಇ-ಮೇಲ್, ಶುಭಾಶಯ ಪತ್ರಗಳು ಮುಂತಾದ ಸೇವೆಗಳನ್ನು ವೆಬ್ ಲೋಕಕ್ಕೆ ಪರಿಚಯಿಸಿರುವ ವೆಬ್‌ದುನಿಯಾದ ಮತ್ತೊಂದು ಕೊಡುಗೆ "ನನ್ನ ವೆಬ್‌ದುನಿಯಾ". ಬಳಕೆದಾರರು ತಮ್ಮದೇ ಭಾಷೆಯಲ್ಲಿ ತಮ್ಮದೇ ಪೋರ್ಟಲ್ ಒಂದನ್ನು ಇಲ್ಲಿ ರಚಿಸಬಹುದಾಗಿದೆ. ನಿಮ್ಮ ಅಭಿಪ್ರಾಯಗಳನ್ನು ಮಂಡಿಸಬಹುದಾಗಿದೆ. ಮನಸ್ಸಿನಲ್ಲಿ ಏನೇನು ಹೊಳೆಯುತ್ತದೆಯೋ ಅದನ್ನು ಅಕ್ಷರರೂಪಕ್ಕೆ ಇಳಿಸಬಹುದಾಗಿದೆ.

ನಿಮ್ಮ ವೆಬ್‌ದುನಿಯಾ ಡಾಟ್ ಕಾಂ ಇ-ಮೇಲ್ ಐಡಿಯೊಂದಿಗೆ ಲಾಗಿನ್ ಆದಲ್ಲಿ ನಿಮ್ಮದೇ ಆದ ಸ್ವಂತ ಪೋರ್ಟಲ್ ರಚಿಸುವುದು http://kannada.mywebdunia.com ನಿಮಗೆ ಸಾಧ್ಯ.

ಇಂಗ್ಲಿಷ್, ಕನ್ನಡದ ಜತೆಗೆ ಭಾರತದ ಒಟ್ಟು ಒಂಬತ್ತು ಭಾಷೆಗಳಲ್ಲಿ ನೀವು ಪೋರ್ಟಲ್ ರಚಿಸಬಹುದಾಗಿದೆ. ಇಲ್ಲಿ ನಿಮ್ಮ ವ್ಯಕ್ತಿಗತ ವಿವರಗಳನ್ನು ಸಲ್ಲಿಸಿ, ಚಿತ್ರಗಳನ್ನು ಅಪ್‌ಲೋಡ್ ಮಾಡಬಹುದು. ನಿಮಗೆ ಬೇಕಾಗಿರುವ ಆರೆಸ್ಸೆಸ್ ಫೀಡ್‌ಗಳನ್ನು ನಿಮ್ಮ ಪೋರ್ಟಲ್‌ನಲ್ಲಿ ಅಳವಡಿಸಬಹುದು. ಚಿತ್ರಗಳನ್ನು ಸಂಗ್ರಹಿಸಿಡಬಹುದು. ನಿಮ್ಮಿಷ್ಟದ ಅಂತರ್ಜಾಲ ತಾಣಗಳ ಲಿಂಕ್‌ಗಳನ್ನು ನಿಮ್ಮದೇ ಪೋರ್ಟಲ್‌ನಿಂದ ನೀಡಬಹುದು.

ಇದರೊಂದಿಗೆ ನಿಮ್ಮ ಆಸಕ್ತಿಯ ವಿಭಿನ್ನ ವರ್ಗಗಳಿಗೆ ಅವುಗಳದ್ದೇ ಆದ ವಿವಿಧ ಚಾನೆಲ್‌ಗಳನ್ನು ರಚಿಸುವ ಅವಕಾಶ ಇಲ್ಲಿದೆ. ಉದಾಹರಣೆಗೆ, ನೀವು ಭಾವನಾತ್ಮಕ ಜಗತ್ತಿನ ಬಗ್ಗೆ, ಹಾಸ್ಯದ ಬಗ್ಗೆ, ಸುದ್ದಿ ವಿಶ್ಲೇಷಣೆ ಬಗ್ಗೆ, ಜಗತ್ತಿನ ಆಗುಹೋಗುಗಳ ಬಗ್ಗೆ, ವಿಜ್ಞಾನದ ಬಗ್ಗೆ... ಹೀಗೆ ವಿಭಿನ್ನ ವಿಷಯಗಳಿಗಾಗಿ ಪ್ರತ್ಯೇಕ ಚಾನೆಲ್‌ಗಳನ್ನು ರಚಿಸಿ ಆಯಾ ಚಾನೆಲ್‌ಗಳ ಅಡಿಯಲ್ಲಿ ಲೇಖನಗಳನ್ನು ಪೋಸ್ಟ್ ಮಾಡಬಹುದಾಗಿದೆ.

ನಿಮ್ಮ ಆನ್‌ಲೈನ್ ಮಿತ್ರರಿಗೂ ನಿಮ್ಮದೇ ಪೋರ್ಟಲ್ ಬಗ್ಗೆ ತಿಳಿಸಿ, ಸಮಕಾಲೀನ ವಿಷಯಗಳ ಬಗ್ಗೆ ಚರ್ಚೆಗಳನ್ನು ಕೂಡ ನಿಮ್ಮ ಪೋರ್ಟಲ್‌ಗಳಲ್ಲೇ ಮಾಡಬಹುದಾಗಿದೆ. ನಿಮ್ಮ ಸಿಸ್ಟಮಿನಲ್ಲಿ ಕನ್ನಡ ಟೈಪ್ ಮಾಡುವ ಅವಕಾಶ ಇಲ್ಲವೇ? ಅದಕ್ಕಾಗಿ ಪ್ರತ್ಯೇಕ ಸಾಫ್ಟ್‌ವೇರ್ ಅಳವಡಿಸಿಕೊಳ್ಳುವ ಅಗತ್ಯವಿಲ್ಲದೆಯೇ, ಆನ್‌ಲೈನಿನಲ್ಲೇ ಸುಲಭವಾಗಿ ನೀವು ಯುನಿಕೋಡ್‌ನಲ್ಲಿ ಟೈಪ್ ಮಾಡಿ, ಬ್ಲಾಗಿಗೆ ಏರಿಸಬಹುದು.

ಆನ್‌ಲೈನ್ ಲೋಕದಲ್ಲಿ ಬ್ಲಾಗ್ ಎಂಬ ಪರಿಕಲ್ಪನೆ ಜನಜನಿತ. ಬಹುತೇಕವಾಗಿ ಅದನ್ನೇ ಹೋಲುವ ಮತ್ತು ಅದಕ್ಕಿಂತ ಹೆಚ್ಚಿನ ಅವಕಾಶಗಳನ್ನು ನೀಡು ನನ್ನ ವೆಬ್‌ದುನಿಯಾ ಹೇಗಿದೆ ಅಂತ ಪರೀಕ್ಷಿಸಿ ನೋಡಿ.

ವೆಬ್ದುನಿಯಾವನ್ನು ಓದಿ