ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಅನಿಲ್ ಕುಂಬ್ಳೆಯಷ್ಟು ವಿಕೆಟ್ ಪಡೆದ ಇನ್ನೊಬ್ಬ ಬೌಲರ್ ಇಲ್ಲ.
1970ರ ಅಕ್ಟೋಬರ್ 17ರಂದು ಜನಿಸಿದ ಕುಂಬ್ಳೆಯ ಸ್ಪಿನ್ ಬೌಲಿಂಗ್ ನೋಡುವುದೇ ಒಂದು ಚಂದ. ಕ್ರಿಕೆಟ್ ಕ್ಷೇತ್ರದಲ್ಲಿ ತನ್ನದೆ ದಾಖಲೆಗಳನ್ನು ಬರೆದಿರುವ ಮತ್ತು ಮುರಿದಿರುವ ಅನಿಲ್ ಕುಂಬ್ಳೆ ಟೆಸ್ಟ್ ಪಂದ್ಯ ಒಂದರಲ್ಲಿ ಎಲ್ಲ ವಿಕೆಟ್‌ಗಳನ್ನು ಕಬಳಿಸಿ ಹೆಸರು ಮಾಡಿದ್ದಾರೆ.
ಇವರು 2007ರ ವಿಶ್ವಕಪ್‌ನಿಂದ ಹಿಂದಿರುಗಿದ ಬಳಿಕ ಏಕದಿನ ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ.