ಶೇನ್ ವಾರ್ನ್

ಕ್ರಿಕೆಟ್ ವಿಶ್ವ ಕಂಡ ಶ್ರೇಷ್ಠ ಲೆಗ್-ಸ್ಪಿನ್ ಬೌಲರ್‌ಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಶೇನ್ ವಾರ್ನೆ ಒಬ್ಬರು. 1969ರ ಸೆಪ್ಟಂಬರ್ 13ರಂದು ಜನಿಸಿದ ವಾರ್ನ್, 2007ರ ಜನವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 700 ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ವಾರ್ನೆ. ಅವರು ನಿವೃತ್ತಿಯ ವೇಳೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 708 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 293 ವಿಕೆಟ್ ಪಡೆದಿದ್ದರು. 1991ರಲ್ಲಿ ಅವರು ತಮ್ಮ ಕ್ರಿಕೆಟ್ ಜೀವನ ಆರಂಭಿಸಿದರು.

ಟೆಸ್ಟ್ ಮತ್ತು ಏಕದಿನ ಪಂದ್ಯ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 1000 ವಿಕೆಟ್ ಪಡೆದ ದಾಖಲೆಯನ್ನು ವಾರ್ನೆ ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ