ಭಾರತದ ಪಾಲಿಗೆ ರೋಮಾಂಚಕಾರಿ ಗೆಲುವು

ಗುರುವಾರ, 6 ಸೆಪ್ಟಂಬರ್ 2007 (08:56 IST)
PTI
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಮಿಂಚಿನ 94 ರನ್‌ಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಓವಲ್‌ನಲ್ಲಿ ನಡೆದ ಸರಣಿಯ ಆರನೆ ಪಂದ್ಯವನ್ನು ಎರಡು ವಿಕೆಟ್‌ಗಳ ಅಂತರದಿಂದ ಗೆದ್ದ ಟೀಮ್ ಇಂಡಿಯಾ. ಕಂಡರಿಯದ ರೀತಿಯಲ್ಲಿ ಸರಣಿಯನ್ನು 3-3 ಅಂತರಕ್ಕೆ ತಂದು ನಿಲ್ಲಿಸಿದೆ. ಲಾರ್ಡ್ಸ್‌ನಲ್ಲಿ ಶನಿವಾರ ನಡೆಯಲಿರುವ ಅಂತಿಮ ಪಂದ್ಯ ಉಭಯ ತಂಡಗಳ ಪಾಲಿಗೆ ಸತ್ವ ಪರಿಕ್ಷೆಯಾಗಲಿದೆ.

ಎದುರಾಳಿ ಪಾಲ್ ಕಾಲಿಂಗ್‌ವುಡ್ ನೆತೃತ್ವದ ಬ್ರಿಟಿಷ್ ಪಡೆ ನೀಡಿದ ಆಸಾಧ್ಯದ 316 ರನ್‌ಗಳ ಸವಾಲನ್ನು ಬೆನ್ನತ್ತಿದ ಭಾರತ, ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಕೇಕೆಯನ್ನು ಹಾಕಿತು.

ಸಚಿನ್ ತೆಂಡುಲ್ಕರ್; ಇನ್ನಿಂಗ್ಸ್ ಅಂತ್ಯದಲ್ಲಿ ಕಾಲು ಜೊಂಪು ಹಿಡಿದಿದ್ದರಿಂದ ಶತಕ ವಂಚಿತರಾದರು. ಮತ್ತೇ ಲಿಟಲ್ ಮಾಸ್ಟರ್ ತನ್ನ ಕ್ರಿಕೆಟ್ ಜೀವನದಲ್ಲಿ ಹೆಚ್ಟು ಕಡಿಮೆ ಇಂಗ್ಲೆಂಡ್ ಐದು ಬಾರಿ ಕೂದಲೆಳೆಯ ಅಂತರದಿಂದ ಶತಕ ವಂಚಿತರಾದರು.

ಕೇವಲ ಎರಡು ದಿನಗಳ ಹಿಂದೆಯಷ್ಟೆ ಮೊದಲಿನಂತೆ ಏಕದಿನ ಕ್ರಿಕೆಟ್ ಆಡುವುದಕ್ಕೆ ದೇಹ ಸಹಕರಿಸುತ್ತಿಲ್ಲ ಎಂದು ಇದೇ ಸಚಿನ್ ಆಡಿದ್ದರು. ಆದರೆ ಇಂದು ಅವರ ಆಟ ನೋಡಿದರೆ ಸಚಿನ್ ಪಾಲಿಗೆ ದಣಿವು ಎಂದೂ ಕಾಡಲಿಕ್ಕಿಲ್ಲ. ಬೌಲರುಗಳನ್ನು ಹುರಿದು ಮುಕ್ಕುವ ಸಚಿನ್ ಚಪಲತೆ ಬಹುಶಃ ಕ್ರಿಕೆಟ್ ಪ್ರೇಮಿಗಳು ಕಂಡಿಯೇ ಇಲ್ಲ.

ಮರುಕಳಿಸಿದ ಗತ ನೆನಪುಗಳು:
PTI
ಐದಾರು ವರ್ಷಗಳ ಹಿಂದಿನ ಮಾತು. ಸಚಿನ್- ಸೌರವ್ ಜೋಡಿ ಪ್ರಬಲ ಬೌಲಿಂಗ್ ದಾಳಿಯನ್ನು ಚಿಂದಿ ಮಾಡುತ್ತಿದ್ದುದು ಮತ್ತೊಮ್ಮೆ ನೆನಪಿನ ಅಂಗಳದಲ್ಲಿ ಸುಳಿಯುವಂತೆ ಮಾಡಿತು. ಭರ್ತಿ 22.2 ಓವರುಗಳ ಕಾಲ ಇಂಗ್ಲೆಂಡ್ ಬೌಲಿಂಗ್‌ನ್ನು ಜೊತೆಯಾಗಿ ಎದುರಿಸಿದ ಸಚಿನ್ ಮತ್ತು ಸೌರವ್ ಗಂಗೂಲಿ, ಮೊದಲ ವಿಕೆಟ್ ಜೊತೆಯಾಟದಲ್ಲಿ ನೂರೈವತ್ತು ರನ್‌ಗಳು ತಂಡದ ಮೊತ್ತಕ್ಕೆ ಸೆರ್ಪಡೆಗೊಂಡಿತು.

ಭರ್ಜರಿ ರನ್ ಸುರಿಮಳೆಯಿಂದ ಭಾರತ ಪಂದ್ಯದ ಗೆಲುವಿನ ಹತ್ತಿರ ನಿದಾನವಾಗಿ ಸುಳಿಯಲು ಪ್ರಾರಂಭಿಸಿತು. ಬ್ರಾಡ್ ಬೌಲಿಂಗ್‌ನಲ್ಲಿ ಸೌರವ್ ಗಂಗೂಲಿ ಔಟಾಗುವುದರೊಂದಿಗೆ ಭಾರತದ ಮೊದಲ ಹುದ್ದರಿ ಇಂಗ್ಲೆಂಡ್‌ಗೆ ದಕ್ಕಿತು. ಸಚಿನ್ ತೆಂಡುಲ್ಕರ್; ಮಾಂಟಿ ಸಿಂಗ್ ಪನೆಸರ್ ಬೌಲಿಂಗ್‌ನಲ್ಲಿ ಆಫ್‌ಸ್ಟಂಪ್‌ನಿಂದ ಹೊರಬಂದು ಚೆಂಡನ್ನು ಮಿಡ್ ಆಫ್‌ನತ್ತ ತಳ್ಳುವ ಪ್ರಯತ್ನದಲ್ಲಿ ಪಾಲ್ ಕಾಲಿಂ‌ಗ್‌ವುಡ್ ಮಿಂಚಿನ ವೇಗದಲ್ಲಿ ತೆಗೆದುಕೊಂಡ ಕ್ಯಾಚ್‌ಗೆ ಬಲಿಯಾದರು.

ಸೌರವ್, ಸಚಿನ್ ವಿಕೆಟ್ ಪತನದ ನಂತರ ಯುವರಾಜ್ ಸಿಂಗ್ ಮತ್ತು ರಾಹುಲ್ ದ್ರಾವಿಡ್ ಅವರ ಹುದ್ದರಿಗಳು ಬೇಗನೆ ಉರುಳಿದವು. ಒಂದು ಕಡೆ ವಿಕೆಟ್ ನಾಲ್ಕು ವಿಕೆಟ್ ಪತನ. ಇನ್ನೊಂದು ಕಡೆ ಏರುತ್ತಿದ್ದ ರನ್ ಬೇಡಿಕೆಯಿಂದ ಪಂದ್ಯ ನಿದಾನವಾಗಿ ಇಂಗ್ಲೆಂಡ್ ಪರ ವಾಲಿದಂತೆ ಅನಿಸುತ್ತಿತ್ತು. ಆದರೆ ಮೊದಲು ಗೌತಮ್ ಗಂಭೀರ್ ನಂತರ ಮಹೇಂದ್ರ ಸಿಂಗ್ ಧೋನಿ ಮತ್ತು ಅಂತಿಮವಾಗಿ ಕರ್ನಾಟಕದ ರಾಬಿನ್ ಉತ್ತಪ್ಪ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿ ಇರಿಸಿದರು.

ದಿನೇಶ್ ಕಾರ್ತಿಕ್ ಬದಲು ತಂಡದಲ್ಲಿ ಸ್ಥಾನ ಪಡೆದ ರಾಬಿನ್ ಉತ್ತಪ್ಪ. ಅಚ್ಚರಿಯ ಹೊಡೆತಗಳಿಂದ ಇಂಗ್ಲೆಂಡ್ ವಿಕೆಟ್ ಕೀಪರ್ ಮ್ಯಾಟ್ ಪ್ರೀಯರ್ ಸಹಿತ ಎಲ್ಲರಿಗೂ ಚಳ್ಳೆ ಹಣ್ಣು ತಿನಿಸಿದರು. ಅತ್ತಿಂದಿತ್ತ ಚುರುಕಾಗಿ ಡೈವ್ ಮಾಡಿ ರನ್‌ ಗತಿಗೆ ಕಡಿವಾಣ ಹಾಕಿದ್ದ ಪ್ರಿಯರ್ ಅವರನ್ನು ಬ್ರಾಡ್ ಅವರ ಎಸೆತವೊಂದನ್ನು ಪಿಚ್ ಆಗಲು ಕೂಡ ಅವಕಾಶ ನೀಡದೆ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ್ದು ಕಣ್ಣಿಗೆ ಕಟ್ಟುವಂತಿತ್ತು.

ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ಓವಾಷಿಷ್ ಶಹಾ ಅವರ ಅಜೇಯ ಶತಕ, ಲ್ಯುಕ್ ರೈಟ್, ಇಯಾನ್ ಬೆಲ್ ಪಾಲ್ ಕಾಲಿಂಗ್‌ವುಡ್ ಅವರ ಸಮಯೋಚಿತ ಅರ್ಧಶತಕಗಳ ನೆರವಿನಿಂದ ನಿಗಧಿತ ಐವತ್ತು ಓವರುಗಳಲ್ಲಿ, ಎಂಟು ಹುದ್ದರಿಗಳ ನಷ್ಟಕ್ಕೆ 316 ಮಾಡಿತ್ತು.