6 ಎಸೆತ, ಆರು ಸಿಕ್ಸರ್: ಯುವಿ ವಿಶ್ವ ದಾಖಲೆ

ಒಂದು ಓವರಿನಲ್ಲಿ ಐದು ಸಿಕ್ಸರ್ ಹೊಡೆಸಿಕೊಂಡ ಸೇಡನ್ನು ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ತೀರಿಸಿಕೊಂಡಿದ್ದಾರೆ.

ಅದೇ ಇಂಗ್ಲೆಂಡ್ ವಿರುದ್ಧ ಬುಧವಾರ ನಡೆದ ಟ್ವೆಂಟಿ ಟ್ವೆಂಟಿ ಪಂದ್ಯದ 19ನೇ ಓವರಿನ ಎಲ್ಲಾ ಚೆಂಡುಗಳನ್ನೂ ಬೌಂಡರಿ ಗೆರೆ ದಾಟಿಯೇ ಬೀಳುವಂತೆ ಬೀಸಿದ ಯುವರಾಜ್ ಸಿಂಗ್, ವಿಶ್ವ ದಾಖಲೆ ಸರಿಗಟ್ಟಿದರಲ್ಲದೆ, ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸ್ಫೋಟಿಸುವ ಮೂಲಕ, ಕ್ರಿಕೆಟ್ ಇತಿಹಾಸದಲ್ಲೇ ಅತಿವೇಗದ ಶತಕಾರ್ಧ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು.

ಯುವರಾಜ್‌ಸ್ ಸಿಕ್ಸ್ ಸಿಕ್ಸರ್ಸ್

8.1 ಬ್ರಾಡ್ ಬೌಲಿಂಗ್, ಮುನ್ನುಗ್ಗಿ ಬಂದ ಯುವರಾಜ್ ಸಿಂಗ್ ನೇರವಾಗಿ ಭರ್ಜರಿ ಹೋಡೆತ, ಸಿಕ್ಸರ್.

18.2 ಮತ್ತೇ, ಬ್ರಾಡ್,ಮುನ್ನುಗ್ಗಿ ಬಂದ ಚೆಂಡಿಗೆ ಯುವರಾಜ್‌ರಿಂದ ಬ್ಯಾಕ್ ವರ್ಡ್ ಸ್ಕ್ವೆರ್ ಲೆಗ್ ನಿರ್ಧೇಶನ ಹ್ಯೂಜ್ ಸಿಕ್ಸ್.

18.3 ಈ ಬಾರಿ ಚೆಂಡಿಗೆ ಎಕ್ಸ ಟ್ರಾ ಕವರ್ ಮಾರ್ಗ ಪ್ರತಿಯೋಂದು ಎಸೆತಕ್ಕೂ ಸಿಕ್ಸರ್ ಉತ್ತರ. ಬ್ರಾಡ್ ನಿರುತ್ತರ. ದೂರದಲ್ಲಿ ನಿಂತಿರುವ ಪ್ರೆಡ್ಡಿ ಇದು ಅಲ್ಲ ಎಂದು ತಲೆಯಾಡಿಸುವುದು.

18.4 ಬ್ರಾಡ್‌ರಿಂದ ರೌಂಡ್ ದಿ ವಿಕೆಟ್ ಬೌಲಿಂಗ್ ಪ್ರಯತ್ನ, ಯುವರಾಜ್ ಸಿಂಗ್ ಬ್ಯಾಟಿನಿಂದ ಪುನಃ ಬ್ಯಾಕ್‌ವರ್ಡ್ ಪಾಯಿಂಟ್ ಸೂಚನೆ.

18.5 ಯುವರಾಜ್ ಸಿಂಗ್‌ಗೆ ಬ್ರಾಡ್. ಮಂಡಿಯೂರಿ ಕೆಳಗೆ ಬಂದ ಯುವರಾಜ್ ನೇರವಾಗಿ ಚೆಂಡನ್ನು ಮಿಡ್ ವಿಕೆಟ್‌ಗೆ ಅಟ್ಟುತ್ತಾರೆ. ಇಂಗ್ಲೆಂಡ್ ನಾಯಕನಿಂದ ತುರ್ತು ಸಭೆ. ಬ್ರಾಡ್ ಮುಖದಲ್ಲಿ ಜೀವವೇ ಇಲ್ಲ.

18.6 (ಓವರ್ ಕೊನೆಯ ಎಸೆತ) ದೆಹವನ್ನು ಹಿಂದಕ್ಕೆ ಎಳೆದ ಯುವರಾಜ್ ಸಿಂಗ್ ಮಿಡ್ ಆನ್‌ನತ್ತ ಸಿಕ್ಸರ್.

ವೆಬ್ದುನಿಯಾವನ್ನು ಓದಿ