ಅಹ್ಮದಾಬಾದ್ ಟೆಸ್ಟ್: ಕೈಫ್‍‌ಗೆ ಒಲಿದ ಭಾಗ್ಯ

ಸೋಮವಾರ, 31 ಮಾರ್ಚ್ 2008 (09:33 IST)
ಎಪ್ರಿಲ್ 3ರಂದು ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಗಾಯದ ಸಮಸ್ಯೆ ಕಾರಣ ಸಚಿನ್ ತೆಂಡೂಲ್ಕರ್ ಆಡುತ್ತಿಲ್ಲ. ಸಚಿನ್ ಸ್ಥಾನವನ್ನು ಮಹ್ಮದ್ ಕೈಫ್ ತುಂಬಲಿದ್ದು. ಹೆಚ್ಚು ಕಡಿಮೆ ಎರಡು ವರ್ಷದ ನಂತರ ಗ್ರೇಗ್ ಶಿಷ್ಯ ಟೆಸ್ಟ್ ಕ್ರಿಕೆಟಿಗೆ ಮರಳುತ್ತಿದ್ದಾರೆ.

ಚೆನ್ನೈ ಪಂದ್ಯದ ನಾಲ್ಕನೆ ದಿನ ಫೀಲ್ಡಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಆಗಿರುವ ಬಲತೊಡೆ ಗಾಯ ಮರುಕಳಿಸಿದ್ದು, ಕಾರಣ ಅಹ್ಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಸಚಿನ್ ಆಡುವುದು ಅನುಮಾನ ಎಂದು ಬಿಸಿಸಿಐ ಪ್ರಕಟಣೆ ಮಾಹಿತಿ ನೀಡಿದೆ.

ಸಚಿನ್ ಪಂದ್ಯಕ್ಕೆ ಲಭ್ಯವಾಗುವುದು ಅನುಮಾನ ಆಗಿರುವ ಕಾರಣ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಹ್ಮದ್ ಕೈಫ್ ಅವರನ್ನು ಆಯ್ಕೆ ಮಾಡಿದೆ. ಸಚಿನ್ ತೆಂಡೂಲ್ಕರ್ ಅವರೊಂದಿಗೆ ನಾಯಕ ಅನಿಲ್ ಕುಂಬ್ಳೆ ಕೂಡ ತೊಡೆ ನೋವಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತಂಡದ ಫಿಸಿಯೋ ಪಾಲ್ ಕ್ಲೋಸ್ ಅವರು ಅನಿಲ್‌ಗೆ ಆಗಿರುವ ಗಾಯ ಗಂಭೀರ ಪ್ರಮಾಣದದ್ದಲ್ಲ. ಅಹ್ಮದಾಬಾದ್ ಟೆಸ್ಟ್ ಪಂದ್ಯದಲ್ಲಿ ತಂಡದ ಕಪ್ತಾನ್ ಆಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶಿಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಅತ್ತ್ಯುತ್ತಮ ಪ್ರದರ್ಶನ ನೀಡುತ್ತಿರುವ ಮಹ್ಮದ್ ಕೈಫ್ ಅವರು ಹೆಚ್ಚು ಕಡಿಮೆ ಎರಡು ವರ್ಷಗಳ ನಂತರ ರಾಷ್ಟ್ರೀಯ ತಂಡಕ್ಕೆ ಮರಳುತ್ತಿದ್ದಾರೆ. ಜೂನ್ 2006ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೈಫ್ ಟೆಸ್ಟ್ ಪಂದ್ಯ ಆಡಿದ್ದು ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಿಂದ ವಂಚಿತರಾಗಿದ್ದರು.

ವೆಬ್ದುನಿಯಾವನ್ನು ಓದಿ