ಟ್ವೆಂಟಿ-20 ವಿಶ್ವಕಪ್ ಸೂಪರ್ ಎಂಟರ ವೇಳಾಪಟ್ಟಿ

ಬುಧವಾರ, 10 ಜೂನ್ 2009 (12:41 IST)
'ಎ' ಗುಂಪಿನಿಂದ ಭಾರತ ಮತ್ತು ಐರ್ಲೆಂಡ್, 'ಬಿ' ಗುಂಪಿನಿಂದ ಇಂಗ್ಲೆಂಡ್ ಮತ್ತು ಪಾಕಿಸ್ತಾನ, 'ಸಿ' ಗುಂಪಿನಿಂದ ವೆಸ್ಟ್‌ಇಂಡೀಸ್ ಮತ್ತು ಶ್ರೀಲಂಕಾ ಹಾಗೂ 'ಡಿ' ಗುಂಪಿನಿಂದ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ತಂಡಗಳು ಟ್ವೆಂಟಿ-20 ವಿಶ್ವಕಪ್ ಸೂಪರ್ ಎಂಟಕ್ಕೆ ಪ್ರವೇಶ ಪಡೆದುಕೊಂಡಿವೆ.

ಬಾಂಗ್ಲಾದೇಶ, ನೆದರ್ಲೆಂಡ್, ಆಸ್ಟ್ರೇಲಿಯಾ, ಸ್ಕಾಟ್ಲೆಂಡ್‌ ತಂಡಗಳು ಆರಂಭಿಕ ಪಂದ್ಯಗಳಲ್ಲಿ ಸೋಲುಂಡ ಕಾರಣ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿಲ್ಲ.

ಸೂಪರ್ ಎಂಟಕ್ಕೆ ಪ್ರವೇಶಿಸಿರುವ ಎಂಟು ತಂಡಗಳನ್ನು 'ಇ' ಮತ್ತು 'ಎಫ್' ಎಂಬ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. 'ಇ' ವಿಭಾಗದಲ್ಲಿ ಹಾಲಿ ಚಾಂಪಿಯನ್ ಭಾರತ, ಇಂಗ್ಲೆಂಡ್, ವೆಸ್ಟ್‌ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಿವೆ. 'ಎಫ್'ನಲ್ಲಿ ಐರ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಂಡಗಳಿವೆ.

ಸೂಪರ್ ಎಂಟರಲ್ಲಿನ ತಲಾ ಎರಡೆರಡು ತಂಡಗಳು ಅಂದರೆ ಒಟ್ಟು ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಮೊದಲ ಸೆಮಿಫೈನಲ್ ಜೂನ್ 18ರಂದು 'E2' ಮತ್ತು 'F1' ನಡುವೆ ಹಾಗೂ ಎರಡನೇ ಸೆಮಿಫೈನಲ್ ಜೂನ್ 19ರಂದು 'E1' ಮತ್ತು 'F2' ನಡುವೆ ನಡೆಯಲಿದೆ. ಜೂನ್ 21ರಂದು ಫೈನಲ್ ಪಂದ್ಯ ಕ್ರಿಕೆಟ್ ಕಾಶಿಯೆಂದೇ ಖ್ಯಾತವಾಗಿರುವ ಲಾರ್ಡ್ಸ್‌ನಲ್ಲಿ ಜರಗುತ್ತದೆ.

ಸೂಪರ್ ಎಂಟರ ಎಲ್ಲಾ ಪಂದ್ಯಗಳು ಲಾರ್ಡ್ಸ್, ಲಂಡನ್‌ನ ಓವಲ್ ಮತ್ತು ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ಗಳಲ್ಲಿ ನಡೆಯಲಿವೆ. ವೇಳಾಪಟ್ಟಿಯನ್ನು ಭಾರತೀಯ ಕಾಲಮಾನಕ್ಕೆ ಹೊಂದಾಣಿಕೆಯಾಗುವಂತೆ ನೀಡಲಾಗಿದೆ.

ಜೂನ್ 11

I - ನ್ಯೂಜಿಲೆಂಡ್ x ಐರ್ಲೆಂಡ್ - ಸಮಯ: ಸಂಜೆ 5.00

II - ಇಂಗ್ಲೆಂಡ್ x ದಕ್ಷಿಣ ಆಫ್ರಿಕಾ - ಸಮಯ: ರಾತ್ರಿ 9.00

ಜೂನ್ 12

I - ಪಾಕಿಸ್ತಾನ x ಶ್ರೀಲಂಕಾ - ಸಮಯ: ಸಂಜೆ 5.00

II - ಭಾರತ x ವೆಸ್ಟ್‌ಇಂಡೀಸ್ - ಸಮಯ: ರಾತ್ರಿ 9.00

ಜೂನ್ 13

I - ವೆಸ್ಟ್‌ಇಂಡೀಸ್ x ದಕ್ಷಿಣ ಆಫ್ರಿಕಾ - ಸಮಯ: ಸಂಜೆ 5.00

II - ನ್ಯೂಜಿಲೆಂಡ್ x ಪಾಕಿಸ್ತಾನ - ಸಮಯ: ರಾತ್ರಿ 9.00

ಜೂನ್ 14

I - ಐರ್ಲೆಂಡ್ x ಶ್ರೀಲಂಕಾ - ಸಮಯ: ಸಂಜೆ 5.00

II - ಭಾರತ x ಇಂಗ್ಲೆಂಡ್ - ಸಮಯ: ರಾತ್ರಿ 9.00

ಜೂನ್ 15

I - ಪಾಕಿಸ್ತಾನ x ಐರ್ಲೆಂಡ್ - ಸಮಯ: ಸಂಜೆ 5.00

II - ಇಂಗ್ಲೆಂಡ್ x ವೆಸ್ಟ್‌ಇಂಡೀಸ್ - ಸಮಯ: ರಾತ್ರಿ 9.00

ಜೂನ್ 16

I - ನ್ಯೂಜಿಲೆಂಡ್ x ಶ್ರೀಲಂಕಾ - ಸಮಯ: ಸಂಜೆ 5.00

II - ದಕ್ಷಿಣ ಆಫ್ರಿಕಾ x ಭಾರತ - ಸಮಯ: ರಾತ್ರಿ 9.00

ವೆಬ್ದುನಿಯಾವನ್ನು ಓದಿ