ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಯಾವ ದಿಕ್ಕಿಗೆ ಬಾವಿ ನಿರ್ಮಿಸಿದರೆ ಉತ್ತಮ ಗೊತ್ತಾ...?

ಸೋಮವಾರ, 29 ಜನವರಿ 2018 (07:07 IST)
ಬೆಂಗಳೂರು : ಮನೆಗೆ ಬಾವಿಯೆಂಬುದು ನೀರು ಒದಗಿಸುವ ಪ್ರಮುಖ ಮೂಲ. ಕೆಲವರು ಸಂಪೂರ್ಣವಾಗಿ ಬಾವಿಯನ್ನೇ ಅವಲಂಬಿಸಿರುತ್ತಾರೆ. ವಾಸ್ತುಶಾಸ್ತ್ರದಲ್ಲಿ ಬಾವಿಯನ್ನು ನಿರ್ಮಿಸಲು ಕೆಲವೊಂದು ನಿಯಮಗಳಿವೆ. ಬಾವಿಯನ್ನು ಮನೆಯ ಯಾವ  ದಿಕ್ಕಿನಲ್ಲಿ ನಿರ್ಮಿಸಿದರೆ ಉತ್ತಮವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಿದೆ.


ವಾಸ್ತು ಶಾಸ್ತ್ರದ ಪ್ರಕಾರ ಬಾವಿ ಕೊರೆದ ಬಳಿಕ ಹೊಸ ಮನೆಯ ನಿರ್ಮಾಣವನ್ನು ಆರಂಭಿಸಬೇಕು. ಹೊಸ ಮನೆ ನಿರ್ಮಾಣದಲ್ಲಿ ಆ ಬಾವಿಯ ನೀರನ್ನು ಉಪಯೋಗಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ಬಾವಿ ಅಥವಾ ನೀರಿನ ಮೂಲ ಮನೆಯ ಉತ್ತರ ಅಥವಾ ಈಶಾನ್ಯ ಭಾಗದಲ್ಲಿರಬೇಕು. ಬಾವಿಯು ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಇರಬಾರದು. ಬಾವಿಯು ವೃತ್ತಾಕಾರವಾಗಿರಬೇಕು. ನೀರಿಗೆ ದಿನಕ್ಕೆ ಕನಿಷ್ಠ ಐದು ಗಂಟೆಯಾದರೂ ಸೂರ್ಯನ ಬೆಳಕು ಬೀಳುವಂತಿರಬೇಕು. ಹಾಗೆ ಮುಖ್ಯವಾಗಿ ಬಾವಿ ನೀರನ್ನು ಎರಡು ಮನೆಯವರು ಪಾಲು ಮಾಡಿಕೊಳ್ಳಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ