ಬೆಂಗಳೂರು: ರಾತ್ರಿ ಮಲಗಿದ ತಕ್ಷಣ ನಿದ್ರೆ ಮಾಡಲೂ ದೇವರ ಅನುಗ್ರಹ ಬೇಕು. ಕೆಲವರಿಗೆ ಎಷ್ಟೇ ಸುಖ, ಸಂಪತ್ತುಗಳಿದ್ದರೂ ನಿದ್ರೆ ಬಾರದೇ ಹೊರಳಾಡುವ ಪರಿಸ್ಥಿತಿರುತ್ತದೆ. ಸುಖ ನಿದ್ರೆಗಾಗಿ ನಾವು ಯಾವ ಮಂತ್ರ ಹೇಳಬೇಕು ಇಲ್ಲಿ ನೋಡಿ.
ಹಿಂದೂ ಧರ್ಮದಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಮಹತ್ವವಿದೆ. ನಿದ್ರೆಯೂ ಜೀವನದ ಬಹುಮುಖ್ಯ ಭಾಗಗಳಲ್ಲಿ ಒಂದು. ಸಾಮಾನ್ಯವಾಗಿ ಮಾನಸಿಕವಾಗಿ ಅಶಾಂತಿಗಳಿದ್ದಾಗ, ಚಿಂತೆಗಳಿದ್ದಾಗ ಅಥವಾ ಅನಾರೋಗ್ಯದಿಂದಾಗಿ ನಿದ್ರೆ ಸರಿಯಾಗಿ ಆಗದೇ ಇರಬಹುದು.
ಇಂತಹ ಸಂದರ್ಭದಲ್ಲಿ ಮನಸ್ಸನ್ನು ಶಾಂತಗೊಳಿಸಲು ಸುಖ ನಿದ್ರೆಯಾಗಲು ಈ ಮಂತ್ರವನ್ನು ಹೇಳಬೇಕು.
ಈ ಮಂತ್ರವನ್ನು ಹೇಳುವುದರಿಂದ ಮನಸ್ಸು ಇಲ್ಲದ ಚಿಂತೆಗಳನ್ನು ಬಿಟ್ಟು ಶಾಂತವಾಗುತ್ತದೆ. ಇದರಿಂದ ನಿದ್ರೆ ಸುಲಭವಾಗಿ ಹತ್ತುತ್ತದೆ. ಅದೇ ರೀತಿ ಮಲಗುವ ಮುನ್ನ ಹನುಮಂತನ ಕುರಿತಾದ ಮನೋಜವಂ ಮಾರುತ ತುಲ್ಯ ವೇಗಂ ಮಂತ್ರ ಹೇಳುತ್ತಾ ಮಲಗಿದರೆ ಕೆಟ್ಟ ಕನಸುಗಳೂ ಬಾರದಂತೆ ತಡೆಯಬಹುದು.