ಬೆಂಗಳೂರು : ಹಿಂದೂ ಧರ್ಮದಲ್ಲಿ ವೀಳ್ಯದೆಲೆಗೆ ಮಹತ್ತರವಾದ ಸ್ಥಾನವಿದೆ. ಯಾವುದೇ ಪೂಜೆ, ಶುಭ ಸಮಾರಂಭಗಳಲ್ಲಿಯೂ ವೀಳ್ಯದೆಲೆಯನ್ನು ಬಳಸುತ್ತಾರೆ.
ವೀಳ್ಯದೆಲೆ ತುದಿಯಲ್ಲಿ ಲಕ್ಷ್ಮಿವಾಸ, ವೀಳ್ಯದೆ ಬಲಭಾಗದಲ್ಲಿ ಬ್ರಹ್ಮವಾಸ, ವೀಳ್ಯದೆಲೆ ಮದ್ಯದಲ್ಲಿ ಸರಸ್ವತಿ ದೇವಿವಾಸ, ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತಿ ದೇವಿವಾಸ, ವೀಳ್ಯದೆಲೆ ಸಣ್ಣ ದಂಟಿನಲ್ಲಿ ಮಹಾ ವಿಷ್ಣುವಿನವಾಸ, ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರ ದೇವತೆವಾಸ, ವೀಳ್ಯದೆಲೆ ಬುಡದಲ್ಲಿ ಮೃತ್ಯು ದೇವತೆಯವಾಸ, ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಮತ್ತು ದಾರಿದ್ರ ಲಕ್ಷ್ಮಿ ವಾಸವಾಗಿರುತ್ತಾರಂತೆ.
ಇಂತಹ ವೀಳ್ಯದೆಲೆಯನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವತರಹ ಇಟ್ಟು ದೇವರಿಗೆ ನೈವೇದ್ಯ ಮಾಡಲಾಗುತ್ತದೆ. ಅಲ್ಲದೇ ಮಂಗಳವಾರ, ಶುಕ್ರವಾರ ಯಾವುದೇ ಕಾರಣಕ್ಕೂ ವೀಳ್ಯದೆಲೆ ಯನ್ನು ಹೊರಗೆ ಹಾಕಬಾರದು. ಹಾಕಿದರೆ ದಟ್ಟ ದಾರಿದ್ರ್ಯ ಕಾಡುತ್ತದೆಯಂತೆ.