ಅಸಮಾಧಾನ ಬಗೆಹರಿಸಲು ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆಗೆ ಚಿಂತನೆ
ಶನಿವಾರ, 24 ಆಗಸ್ಟ್ 2019 (10:31 IST)
ಬೆಂಗಳೂರು : ಈಗಾಗಲೇ ಸಚಿವ ಸಂಪುಟ ವಿಸ್ತರಣೆಯಾದ ಹಿನ್ನಲೆ ಬಿಜೆಪಿಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಕೆಲವು ಶಾಸಕರು ಅಸಧಾನ ಹೊರಹಾಕಿದ್ದಾರೆ. ಆದಕಾರಣ ಈ ಅಸಮಾಧಾನ ಬಗೆಹರಿಸಲು ಕೆಲವು ಸ್ಥಾನ ಭರ್ತಿಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಹೌದು. ಶೀಘ್ರದಲ್ಲಿಯೇ 3-4 ಶಾಸಕರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ ಈ ಬಗ್ಗೆ ಹೈಕಮಾಂಡ್ ಮುಂದೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದು, ಹೈಕಮಾಂಡ್ ನಿಂದಲೂ ಪೂರಕ ಸ್ಪದನೆ ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ . ಹೀಗಾಗಿ ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಇದೆ ಎನ್ನಲಾಗಿದೆ.
ಉಮೇಶ್ ಕತ್ತಿ ಸೇರಿ ನಾಲ್ವರು ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ತಿಪ್ಪಾರೆಡ್ಡಿ, ಮುರುಗೇಶ್ ನಿರಾಣಿ, ಎಂ.ಪಿ.ರೇಣುಕಾಚಾರ್ಯ, ರಾಜುಗೌಡ ಗೆ ಸಚಿವ ಸ್ಥಾನದ ರೇಸ್ ನಲ್ಲಿರುವ ಶಾಸಕರಾಗಿದ್ದಾರೆ. ಹಾಗೇ ಉಳಿದ ಸ್ಥಾನಗಳನ್ನು ಅನರ್ಹ ಶಾಸಕರಲ್ಲಿ ಕೆಲವರಿಗೆ ಮಾತ್ರ ಪ್ರಮುಖ ಖಾತೆ ನೀಡಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.