ಬೆಂಗಳೂರು : ಮಕ್ಕಳು ಹೇಳಿದ ಮಾತನ್ನು ಕೇಳುವುದಿಲ್ಲ, ಹಠಮಾಡುತ್ತಾರೆ. ಆಗ ಮಕ್ಕಳ ಮೇಲೆ ಈ ರೀತಿ ತಂತ್ರ ಮಾಡಿದರೆ ಅವರು ಹೇಳಿದ ಮಾತು ಕೇಳುವುದಲ್ಲದೇ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ತೋರುತ್ತಾರೆ.
ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನ ಹಾಗೂ ಮಂಗಳವಾರದಂದು ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಆಂಜನೇಯ ಸ್ವಾಮಿಯ ಮೂರ್ತಿಗೆ ಹಚ್ಚುವ ಕೇಸರಿಯನ್ನು ಮಕ್ಕಳ ಹಣೆಗೆ ತಿಲಕವಾಗಿ ಇಡಬೇಕು.
ಹಾಗೇ ಮನೆಯಲ್ಲಿ ಆಂಜನೇಯ ಸ್ವಾಮಿಯ ಫೋಟೋ ಇಟ್ಟು ಅದಕ್ಕೆ ಕೇಸರಿಯನ್ನು ಹಚ್ಚಬೇಕು. ಈ ರೀತಿ ಮಾಡುವುದರಿಂದ ಕೆಲವೇ ವಾರದಲ್ಲಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಆಸಕ್ತಿ ತೋರುತ್ತಾರೆ, ಹೇಳಿದ ಮಾತು ಕೇಳುತ್ತಾರೆ.