ಭಾನುವಾರ ಹುಟ್ಟಿದವರ ಲಕ್ಷಣಗಳೇನು ಗೊತ್ತಾ?

ಗುರುವಾರ, 23 ಜನವರಿ 2020 (05:53 IST)
ಬೆಂಗಳೂರು : ಎಲ್ಲರಿಗೂ ತಾವು ಅಂದುಕೊಂಡಿದ್ದನ್ನು ಸಾಧಿಸಬೇಕು ಎಂಬ ಹಂಬಲವಿರುತ್ತದೆ. ಆದಕಾರಣ ಹುಟ್ಟಿದ ವಾರಕ್ಕೆ ಅನುಗುಣವಾಗಿ ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ಅಂದುಕೊಂಡಿದ್ದು ಈಡೇರುತ್ತದೆ.ಸಂಖ್ಯಾಶಾಸ್ತ್ರದ ಪ್ರಕಾರ ಭಾನುವಾರ ಹುಟ್ಟಿದವರ ಅದೃಷ್ಟ ಸಂಖ್ಯೆ 1. ಆದ್ದರಿಂದ ಇವರು ಪ್ರತಿ ತಿಂಗಳ 1 ನೇ ತಾರೀಖಿನಂದು ಮುಖ್ಯವಾದ ಕೆಲಸಗಳನ್ನು ಮಾಡಿದರೆ ಅದರಲ್ಲಿ ಯಶಸ್ಸು ಸಾಧಿಸುತ್ತಾರೆ.  ಭಾನುವಾರ ಹುಟ್ಟಿದವರು ತುಂಬಾ ಶಿಸ್ತಿನಿಂದ, ಹಠದಿಂದ  ಕೆಲಸ ಮಾಡುತ್ತಾರೆ. ಇವರಿಗೆ ಧೈರ್ಯ, ಆತ್ಮವಿಶ್ವಾಸ ಹೆಚ್ಚು.


ಇವರು ತಂದೆ ತಾಯಿಗೆ ಗೌರವ ಕೊಡುತ್ತಾರೆ. ಭಾನುವಾರ ಹುಟ್ಟಿದವರು ಕಬ್ಬಿಣದ ವ್ಯಾಪಾರ ಮಾಡಿದರೆ ಲಾಭ ಗಳಿಸುತ್ತಾರೆ. ಹಾಗೇ ರಾಜಕೀಯಕ್ಕೆ ಹೋದರೆ ಇವರಿಗೆ ಜಯ ಖಚಿತ. ಇವರಿಗೆ ಹೃದಯದ ಸಮಸ್ಯೆ ಮತ್ತು ಕಣ್ಣಿನ ಸಮಸ್ಯೆ ಎದುರಾಗುವ ಸಂಭವವಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ