ಕ್ಯಾಬ್ ಹತ್ತಿದ್ದ ಯುವತಿಯನ್ನು ಕರೆದೊಯ್ದ ಚಾಲಕ ಆಮೇಲೆ ಮಾಡಿದ್ದೇನು ಗೊತ್ತಾ?

ಬುಧವಾರ, 22 ಜನವರಿ 2020 (10:55 IST)
ಬೆಂಗಳೂರು : ಕ್ಯಾಬ್ ಚಾಲಕನೊಬ್ಬ ಉಂಗಾಂಡ ಯುವತಿಯನ್ನು ಬೆತ್ತಲೆಗೊಳಿಸಿ ಕಾರಿನಿಂದ ಹೊರಕ್ಕೆದಬ್ಬಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಆಲವಳ್ಳಿ ಗ್ರಾಮದ ಬಳಿ ನಡೆದಿದೆ.

ಕಿಡ್ನಿ ಸ್ಟೋನ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದ ಯುವತಿ, ನವಜ್ಯೋತಿ ಸ್ಟ್ರೀಟ್ ಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು. ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಕ್ಯಾಬ್ ಹತ್ತಿದ್ದ ಯುವತಿಯನ್ನು  ಕರೆದೊಯ್ದು ಚಾಲಕ ಆಲವಳ್ಳಿ ಗ್ರಾಮದ ಬಳಿ ಆಕೆಯನ್ನು ಬೆತ್ತಲೆಗೊಳಿಸಿ ಕಾರಿನಿಂದ ಹೊರಕ್ಕೆ  ದಬ್ಬಿದ್ದಾನೆ.

ಜನವರಿ 16ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ