ವಾರದಲ್ಲಿ ಯಾವ ದೇವರನ್ನು ಪೂಜಿಸಿದರೆ ಶೀಘ್ರ ಫಲ ಪ್ರಾಪ್ತಿಯಾಗುತ್ತದೆ ಗೊತ್ತಾ?

ಸೋಮವಾರ, 1 ಜುಲೈ 2019 (09:07 IST)
ಬೆಂಗಳೂರು : ವಾರದಲ್ಲಿ ಒಂದೊಂದು ದಿನ ಒಂದೊಂದು ದೇವರಿಗೆ ಮೀಸಲಾಗಿರುತ್ತದೆ. ಆ ದಿನ ಆಯಾ ದೇವರನ್ನು ಪೂಜಿಸಿದರೆ.ಆ ದೇವರ ಅನುಗ್ರಹ ಖಂಡಿತವಾಗಿಯೂ ಸಿಗುತ್ತದೆ .




*ಭಾನುವಾರ ಸೂರ್ಯ ದೇವನಿಗೆ ಮೀಸಲು. ಭಾನುವಾರದ ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿದ ನಂತರ ಸೂರ್ಯ ನಮಸ್ಕಾರವನ್ನು ಮಾಡಿ, ನೈವೇದ್ಯವಾಗಿ ಪಾಯಸ ಇಟ್ಟು  ಸೂರ್ಯ ದೇವನಿಗೆ ಸಮರ್ಪಿಸಬೇಕು. ಇದರಿಂದ  ಅನಾರೋಗ್ಯದಿಂದ ಬಳಲುತ್ತಿರುವವರು ಚೇತರಿಸಿಕೊಳ್ಳಬಹುದು.


*ಸೋಮವಾರ ಶಿವಿನಿಗೆ ಪ್ರಿಯವಾದ ದಿನ. ಆ ದಿನ ಮಹಾಶಿವನಿಗೆ ಅಕ್ಕಿ ಬೆಲ್ಲ,ಹಾಲಿನಿಂದ ಮಾಡಿದ ಪಾಯಸವನ್ನು ನೈವೇದ್ಯವಾಗಿ ಸಮರ್ಪಿಸುವುದರಿಂದ ಆ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.


* ಮಂಗಳವಾರದ ದಿನ ಆಂಜನೇಯ ಸ್ವಾಮಿ ಮತ್ತು ದುರ್ಗಾ ದೇವಿಯನ್ನು ಪೂಜಿಸಿದರೆ ತುಂಬಾ ಒಳ್ಳೆಯದು.ಆ ದಿನ ರಾಹು ಕಾಲದಲ್ಲಿ ದುರ್ಗಾ ದೇವಿಯನ್ನು ಎರಡು ನಿಂಬೆಹಣ್ಣಿನ ಸಿಪ್ಪೆಯಿಂದ ದೀಪಾರಾಧನೆ (ನಿಂಬೆಹಣ್ಣಿನ ದೀಪ)  ಮಾಡಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ.


* ಬುಧುವಾರದ ದಿನ ಶ್ರೀ ಕೃಷ್ಣನಿಗೆ ತುಂಬಾ ಪ್ರೀತಿಕರವಾದ ದಿನ ತುಳಸಿ ಎಲೆಗಳಿಂದ ಶ್ರೀ ಕೃಷ್ಣನನ್ನು ಪೂಜಿಸಿದರೆ ಅಂದು ದಿಗ್ವಿಜಯ ಆಗುತ್ತದೆ.


* ಗುರುವಾರದ ದಿನ ರಾಘವೇಂದ್ರ ಸ್ವಾಮಿ, ಸಾಯಿಬಾಬಾ ,ದತ್ತಾತ್ರೇಯ ಸ್ವಾಮಿಯನ್ನು ಪೂಜೆ ಮಾಡಿದರೆ ಶೀಘ್ರದಲ್ಲಿ ಅನುಗ್ರಹ ಸಿಗುತ್ತದೆ.


* ಶುಕ್ರವಾರ ಅಂದರೆ ಮಹಾಲಕ್ಷ್ಮೀಗೆ  ತುಂಬಿ ಪ್ರೀತಿಕರವಾದ ದಿನ.ಆದ್ದರಿಂದ ಆ ದಿನ ಕೆಂಪು,ಹಸಿರು,ಬಣ್ಣದ ವಸ್ತ್ರವನ್ನು ಧರಿಸಿ ದೀಪಾರಾಧನೆ ಮಾಡಿದರೆ ಅಷ್ಟ ಐಶ್ವರ್ಯಗಳು ದೊರೆಯುತ್ತವೆ.


* ಶನಿವಾರದ ದಿನ ವೆಂಕಟೇಶ್ವರ ಸ್ವಾಮಿಯನ್ನು ಪೂಜೆ ಮಾಡಿದರೆ ಸಂಕಷ್ಟದಿಂದ ನಾವು ದೂರಾಗಬಹುದು. ಹಾಗೆಯೇ ಆ ದಿನ 8 ಬಾದಾಮಿ ಹಣ್ಣು,ಉದ್ದಿನ ಬೇಳೆ, ಕಪ್ಪು ಎಳ್ಳನ್ನು ದಾನ ಮಾಡಿದರೆ ಶನೈಶ್ಚರ ಸ್ವಾಮಿಯ ಕೃಪೆಯನ್ನು ಪಡೆಯಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ