ಶಿವನು ಹುಲಿ ಚರ್ಮ ಧರಿಸಲು ಕಾರಣವೇನು ಗೊತ್ತಾ…?

ಗುರುವಾರ, 3 ಮೇ 2018 (06:05 IST)
ಬೆಂಗಳೂರು : ತ್ರಿಮೂರ್ತಿಗಳಲ್ಲಿ ಶಿವನೂ ಒಬ್ಬನು. ಸೃಷ್ಟಿ, ಸ್ಥಿತಿ ಕಾರಕರು ಬ್ರಹ್ಮ, ವಿಷ್ಣುಗಳಾದರೆ ಎಲ್ಲವನ್ನೂ ತನ್ನಲ್ಲಿ ಲಯ ಮಾಡಿಕೊಳ್ಳುವವನು ಶಿವನು. ಆದ್ದರಿಂದಲೇ ಶಿವನ ಆಜ್ಞೆ ಇಲ್ಲದೆ ಇರುವೆ ಕುಡಾ ಕಚ್ಚುವುದಿಲ್ಲ ಎಂಬ ನಾಣ್ಣುಡಿ ಪ್ರಚಾರದಲ್ಲಿದೆ. ಮಹದೇವನಾದ ಶಿವನು ಸದಾ ನಿರಾಡಂಬರವಾಗಿಯೇ ಇರುತ್ತಾನೆ. ಇತರೆ ದೇವರುಗಳಂತೆ ಆಭರಣಗಳನ್ನು ಧರಿಸುವುದಿಲ್ಲ. ಸ್ಮಶಾನದಲ್ಲಿ ವಾಸಿಸುತ್ತಾನೆ. ಮೈಗೆ ವಿಭೂತಿಯನ್ನು ಹಚ್ಚಿಕೊಳ್ಳುತ್ತಾನೆ. ಇವಲ್ಲದೆ ಕೇವಲ ಹುಲಿಯ ಚರ್ಮವನ್ನೇ ತನ್ನ ದೇಹಕ್ಕೆ ಸುತ್ತಿಕೊಂಡಿರುತ್ತಾನಲ್ಲವೆ? ಇದಕ್ಕೆ ಕಾರಣ ಏನೆಂದು ತಿಳಿದುಕೊಳ್ಳೋಣ.


ಒಂದು ಕಾಲದಲ್ಲಿ ಶಿವನು ಮೈಮೇಲೆ ಯಾವುದೇ ರೀತಿಯ ವಸ್ತ್ರಗಳನ್ನು ಧರಿಸದೆ ದಿಗಂಬರನಾಗಿದ್ದನು. ಒಂದು ಸಲ ಶಿವನು ಕಾಡಿನಲ್ಲಿ ದಿಗಂಬರನಾಗಿ ಪ್ರಯಾಣಿಸುತ್ತಿರುವಾಗ ಆತನ ತೇಜಸ್ಸನ್ನು ಕಂಡ ಋಷಿಗಳು, ಮಹರ್ಷಿಗಳು, ಪಂಡಿತರ ಪತ್ನಿಯರು ಆಶ್ಚರ್ಯಗೊಂಡರು. ಆತನ ಮುಖದ ತೇಜಸ್ಸನ್ನು ಕಂಡು ಆಕರ್ಷಿತರಾದರು. ಶಿವನು ಅಲ್ಲಿಂದ ಹೋದ ನಂತರವೂ ನಿತ್ಯವೂ ಆತನನ್ನೇ ನೆನಸಿಕೊಳ್ಳುತ್ತಾ ಕುಟೀರದಲ್ಲಿ ಕೆಲಸಗಳನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. ಅವರು ಯಾಕೆ ಆ ರೀತಿಯಾಗಿ ವರ್ತಿಸುತ್ತಿದ್ದಾರೆ ಎಂದು ಅರಿತುಕೊಂಡ ಅವರ ಗಂಡಂದಿರು ಶಿವನನ್ನು -ಕೊಲ್ಲಬೇಕೆಂದುಕೊಂಡು ಸಣ್ಣ ಉಪಾಯ ಮಾಡಿದರು.


ಶಿವನು ಬರುವ ದಾರಿಯಲ್ಲಿ ದೊಡ್ಡ ಹಳ್ಳವನ್ನು ತೋಡಿ, ಅದರಲ್ಲಿ ಅವರ ಮಂತ್ರಶಕ್ತಿಯಿಂದ ಅತ್ಯಂತ ಶಕ್ತಿಯುತವಾದ ಹುಲಿಯನ್ನು ಸೃಷ್ಟಿಸಿ ಇಡುತ್ತಾರೆ. ಆ ಹುಲಿಯು ಶಿವನು ಬರುವ ಸಮಯಕ್ಕೆ ಸರಿಯಾಗಿ ದಿಢೀರನೇ ಪ್ರತ್ಯಕ್ಷವಾಗಿ ದಾಳಿ ನಡೆಸಿತು. ಮಹಾದೇವನಾದ ಶಿವನಿಗೆ ಯಾವ ಜೀವಿಯಾದರೂ ತನ್ನ ಹತೋಟಿ ಹಾಗೂ ಆಜ್ಞೆಯಲ್ಲಿಯೇ ಇರಬೇಕು. ತನ್ನ ಮೇಲೆ ದಾಳಿ ನಡೆಸಿದ ಹುಲಿಯನ್ನು ಶಿವನು ಕೊಂದು ಹಾಕುತ್ತಾನೆ. ನಂತರ ನಡೆದ ವಿಷಯವನ್ನು ತಿಳಿದು ಅಂದಿನಿಂದ ಆ ಹುಲಿಯ ಚರ್ಮವನ್ನೇ ಧರಿಸುತ್ತಿದ್ದಾನೆ. ಇದೇ…ಶಿವನು ಹುಲಿಯ ಚರ್ಮವನ್ನು ಧರಿಸುವ ಹಿಂದೆ ಇರುವ ನಿಜವಾದ ಕಾರಣ. ಇದರ ಬಗ್ಗೆ ಶಿವಪುರಾಣದಲ್ಲೂ ವಿವರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ