ಗಣೇಶನನ್ನು ಈ 5 ಪತ್ರೆಗಳಿಂದ ಪೂಜಿಸಿದರೆ 21 ಪತ್ರೆಗಳಿಂದ ಪೂಜೆ ಮಾಡಿದ ಫಲ ದೊರೆಯುತ್ತದೆಯಂತೆ

ಶುಕ್ರವಾರ, 21 ಆಗಸ್ಟ್ 2020 (07:17 IST)
ಬೆಂಗಳೂರು : ಗಣೇಶ ಚತುರ್ಥಿಯಂದು ಗಣೇಶನ ಸ್ಮರಣೆ ಮಾಡುತ್ತಾರೆ. ಅಂದು ಗಣೇಶನನ್ನು 21 ಪತ್ರೆಗಳಿಂದ ಪೂಜೆ ಮಾಡುತ್ತಾರೆ. ಆದರೆ 21 ಪತ್ರೆಯಿಂದ ಪೂಜೆ ಮಾಡಲು ಸಾಧ್ಯವಾಗದವರು ಈ  5 ಪತ್ರೆಗಳಿಂದ ಪೂಜಿಸಿದರೆ 21 ಪತ್ರೆಗಳಿಂದ ಪೂಜೆ ಮಾಡಿದ ಫಲ ದೊರೆಯುತ್ತದೆಯಂತೆ.

ಚತುರ್ಥಿಯಂದು ಗಣೇಶನಿಗೆ  21 ಪತ್ರೆಗಳಿಂದ ಪೂಜೆ ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ.  ಆದರೆ ಈ 21 ಪತ್ರೆಗಳು ಎಲ್ಲಾ ಕಡೆ ಸಿಗುವುದಿಲ್ಲ. ಆದಕಾರಣ ಗಣೇಶನ ಪೂಜೆ ಮಾಡುವಾಗ ಈ  5 ಪತ್ರೆಗಳಾದ ಗರಿಕೆ,  ಪಚ್ಚೆ ಪತ್ರೆ, ಮರುಗ, ಬಿಲ್ವಪತ್ರೆ, ತುಳಸಿ ಯಿಂದ ಪೂಜೆ ಮಾಡಿದರೆ ನಿಮ್ಮ ಸಕಲ ಇಷ್ಟಾರ್ಥ ಸಿದ್ಧಿಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ