ಬೆಂಗಳೂರು : ನಿಮ್ಮ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದರೆ, ಅಂದುಕೊಂಡ ಕೆಲಸದಲ್ಲಿ ಯಶಸ್ಸು ಕಾಣಬೇಕೆಂದರೆ ಬುಧವಾರದಂದು ಗಣೇಶನ ಮುಂದೆ ಈ ಚಿಕ್ಕ ಕೆಲಸ ಮಾಡಿದರೆ ನೀವು ಅಂದುಕೊಂಡಂತೆ ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ನಡೆಯುತ್ತದೆ.
ಬುಧವಾರದಂದು ಬೆಳಿಗ್ಗೆ ಸ್ನಾನಾಧಿಗಳನ್ನು ಮುಗಿಸಿ ಗಣೇಶನ ಫೋಟೋದ ಮುಂದೆ ಒಂದು ಬಿಳಿ ಬಣ್ಣದ ದಾರವನ್ನು ತೆಗೆದುಕೊಂಡು ಅದಕ್ಕೆ ಅರಶಿನ ಹಚ್ಚಿ ಅದಕ್ಕೆ 7 ಗಂಟುಗಳನ್ನು ಹಾಕಿ. ಅದನ್ನು ಗಣೇಶನ ಪೋಟೊ ಮುಂದೆ ಇಟ್ಟು “ಓಂ ಗಣ್ ಗಣಪತಿಯೇ ನಮಃ” ಎಂದು 21 ಬಾರಿ ಪಠಿಸಬೇಕು. ಬಳಿಕ ಆ ದಾರವನ್ನು ಒಂದು ಬಿಳಿ ಬಣ್ಣದ ಕಾಗದದಲ್ಲಿ ಸುತ್ತಿ ನಿಮ್ಮ ಪರ್ಸ್ ನಲ್ಲಿಡಬೇಕು.