ಶುಕ್ರವಾರ ಮನೆಯ ಹೊಸ್ತಿಲಿಗೆ ಈ ಬಣ್ಣದ ಹೂಗಳನ್ನಿಟ್ಟು ಪೂಜಿಸಿದರೆ ಲಕ್ಷ್ಮೀ ಆ ಮನೆಯನ್ನು ಪ್ರವೇಶಿಸುತ್ತಾಳಂತೆ!
ಗುರುವಾರ, 7 ಜೂನ್ 2018 (13:55 IST)
ಬೆಂಗಳೂರು : ಹಿಂದೂ ಪುರಾಣಗಳ ಪ್ರಕಾರ ಲಕ್ಷ್ಮೀದೇವಿ ಧನಕ್ಕೆ, ಐಶ್ವರ್ಯಕ್ಕೆ ಅಧಿಪತಿ. ಆಕೆ ಒಲಿದರೆ ಎಲ್ಲವೂ ಶುಭವಾಗುತ್ತದೆ, ಹಣ ಹರಿದು ಬರುತ್ತದೆ ಎಂಬುದು ಬಹಳಷ್ಟು ಮಂದಿಯ ನಂಬಿಕೆ. ಆಕೆಯನ್ನು ಒಲಿಸಿಕೊಳ್ಳಬೇಕಾದರೆ ಶುಕ್ರವಾರದಂದು ಆಕೆಯನ್ನು ಶೃದ್ಧೆ ಭಕ್ತಿಯಿಂದ ಪೂಜಿಸಬೇಕು. ಪೂಜಿಸುವ ಮೊದಲು ಆಕೆಯನ್ನು ಮನೆಗೆ ಸ್ವಾಗತಿಸಬೇಕು. ಅದಕ್ಕಾಗಿ ಮನೆಯ ಹೊಸ್ತಿಲನ್ನು ಮೊದಲು ಶೃಂಗರಿಸಬೇಕಾಗುತ್ತದೆ. ಹಾಗೇ ಶೃಂಗರಿಸುವಾಗ ಲಕ್ಷ್ಮೀದೇವಿಗೆ ಪ್ರಿಯವಾದ ಬಣ್ಣದ ಹೂಗಳನ್ನಿಟ್ಟರೆ ಒಳ್ಳೆಯದು ಎಂದು ಪಂಡಿತರು ಹೇಳುತ್ತಾರೆ.
ಶುಕ್ರವಾರ ದಿನದಂದು ಮನೆಯ ಮುಖ್ಯದ್ವಾರದ ಹೊಸ್ತಿಲನ್ನು ತೊಳೆದು ಅದಕ್ಕೆ ಅರಶಿನ ಕುಂಕುಮ ಹಚ್ಚಿ, ಹೊಸ್ತಿಲ ಮೇಲೆ ಹೂಗಳನ್ನಿಟ್ಟು, ದೀಪ ಬೆಳಗಬೇಕು. ಆದರೆ ಹೊಸ್ತಿಲನ್ನು ಶೃಂಗರಿಸುವಾಗ ಬಿಳಿ ಬಣ್ಣದ ಹೂಗಳನ್ನಿಟ್ಟರೆ ಲಕ್ಷ್ಮೀದೇವಿ ಸಂತೋಷದಿಂದ ಮನೆ ಪ್ರವೇಶಿಸುತ್ತಾಳೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ತುಂಬಿರುತ್ತದೆ ಎಂದು ಪಂಡಿತರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ