ಮಕರ ಸಂಕ್ರಾಂತಿ ಪೂಜೆಯನ್ನು ಹೇಗೆ ಮಾಡಬೇಕು, ಯಾವ ಮಂತ್ರ ಹೇಳಬೇಕು

Krishnaveni K

ಮಂಗಳವಾರ, 14 ಜನವರಿ 2025 (08:56 IST)
ಬೆಂಗಳೂರು: ಇಂದು ಮಕರ ಸಂಕ್ರಾಂತಿ ಹಬ್ಬವಾಗಿದ್ದು ಹೇಗೆ ಪೂಜೆ ಮಾಡಬೇಕು ಮತ್ತು ಯಾವ ಮಂತ್ರ ಹೇಳಬೇಕು ಇಲ್ಲಿದೆ ವಿವರ.

ಮಕರ ಸಂಕ್ರಾಂತಿಯನ್ನು ದೇಶದಾದ್ಯಂತ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಪೊಂಗಲ್, ಉತ್ತರ ಭಾರತದ ಕಡೆ ಲೊಹರಿ ಎಂದು ಕರೆಯಲಾಗುತ್ತದೆ. ಇದು ಸುದ್ದಿ ಹಬ್ಬವಾಗಿದ್ದು ರೈತರಿಗೆ ವಿಶೇಷವಾದ ಹಬ್ಬವಾಗಿದೆ.

ಸಂಕ್ರಾಂತಿ ಹಬ್ಬದಂದು ವಿಶೇಷವಾಗಿ ರೈತರು ತಾವು ಬೆಳೆದ ಬೆಳೆಗೆ, ಭೂಮಿ ತಾಯಿಗೆ ಮತ್ತು ಬೆಳಕು ಕೊಡುವ ಸೂರ್ಯನಿಗೆ ಪೂಜೆ ಮಾಡುತ್ತಾರೆ. ಈ ದಿನ ಹೊಸ ಅಕ್ಕಿ ಊಟ ಮಾಡುವ ಕ್ರಮ ಅನೇಕ ಕಡೆಗಳಲ್ಲಿದೆ.

ಪೂಜೆ ಮಾಡುವುದು ಹೇಗೆ?
ಈ ದಿನ ಬೆಳಿಗ್ಗೆಯೇ ಎದ್ದು ಸಾಧ್ಯವಾದರೆ ನದಿ ಸ್ನಾನ ಮಾಡಬೇಕು. ಶುದ್ಧರಾಗಿ ದೇವರ ಕೋಣೆಯನ್ನು ಶುಚಿಗೊಳಿಸಿ ತಾವು ಬೆಳೆದ ಬೆಳಯನ್ನು ದೇವರ ಮುಂದಿಟ್ಟು ಪೂಜೆ ಮಾಡುವುದು ಕ್ರಮ. ಒಂದು ವೇಳೆ ಬೆಳೆ ಇಲ್ಲದೇ ಹೋದರೆ ದೇವರಿಗೆ ನೈವೇದ್ಯವಾಗಿ ಎಳ್ಳು-ಬೆಲ್ಲ, ಕಬ್ಬು ಇಟ್ಟು ಪೂಜೆ ಮಾಡಿ ಮನೆ ಮಂದಿಗೆಲ್ಲಾ ಹಂಚಬೇಕು. ಹಾಗೆಯೇ ತಮ್ಮ ಕೈಲಾದ ಮಟ್ಟಿಗೆ ಬಡವರಿಗೆ ಈ ದಿನ ದಾನ ಮಾಡಿದರೆ ಒಳಿತು.  ಬೆಳಿಗ್ಗೆ 9.03 ರಿಂದ ಸಂಜೆ 5.45 ರೊಳಗಾಗಿ ಶುಭ ಮುಹೂರ್ತವಿದೆ.

ಮಂತ್ರ ಯಾವುದು?
ವಿಶೇಷವಾಗಿ ಸಂಕ್ರಾಂತಿಯನ್ನು ಸೂರ್ಯ ದೇವನ ಆರಾಧನೆಗೆ ಮೀಸಲಿಡಲಾಗಿದೆ. ಹೀಗಾಗಿ ಸೂರ್ಯನ ಕುರಿತಾದ ಮಂತ್ರ ಹೇಳುವುದು ಉತ್ತಮ.

ಓಂ ಸೂರ್ಯಾಯ ಆದಿತ್ಯಾಯ ಶ್ರೀ ಮಹಾದೇವಾಯ ನಮಃ

ಈ ಮಂತ್ರದ ಜೊತೆಗೆ ಸೂರ್ಯನ ಗಾಯತ್ರಿ ಮಂತ್ರವನ್ನು ಹೇಳಿಕೊಂಡು ಪೂಜೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ