ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

ಶುಕ್ರವಾರ, 27 ಜುಲೈ 2018 (18:27 IST)
ಶಾಲಿವಾಹನ ಗತಶಕ ೧೯೪೦ನೇ ವಿಲಂಬಿ ನಾಮ ಸಂವತ್ಸರದ ದಕ್ಷಿಣಾಯನ ಗ್ರೀಷ್ಮ ಋತು ಆಶಾಡ ಮಾಸ ಶುಕ್ಲ ಪಕ್ಷ ದಿನಾಂಕ ೨೭/೭/೨೦೧೮ ರಂದು ಶುಕ್ರವಾರ ತಿಥಿ ಹುಣ್ಣಿಮೆ ಮಧ್ಯರಾತ್ರಿ ೨ರ ವರೆಗೆ ಮಳೆ ನಕ್ಷತ್ರ ಪುಷ್ಯ. ನಿತ್ಯ ನಕ್ಷತ್ರ ಉತ್ತರಾಷಾಡ ರಾತ್ರಿ ೧೨-೩೩ರ ವರೆಗೆ ಸೂರ್ಯೊದಯ ೬-೧೬.
ಸೂರ್ಯಾಸ್ತ ೭-೦೦ ರಾಹುಕಾಲ ಬೆಳಗ್ಗೆ ೧೦-೩೦ರಿಂದ ೧೨ರ ವರೆಗೆ ಈ ದಿವಸ ಹೋಮ ಹವನಕ್ಕೆ ಅಗ್ನಿ ಇದೆ. ಹುಣ್ಣಿಮೆ ಶ್ರಾದ್ದಾದಿಗಳನ್ನ ಇವತ್ತು ಮದ್ಯಾಹ್ನ ೩ರ ಒಳಗೆ ಮಾಡತಕ್ಕದ್ದು. ಈ ದಿವಸ ಗುರುಪೂರ್ಣಿಮಾ ವ್ಯಾಸ ಪೂರ್ಣಿಮಾ  ಸನ್ಯಾಸಿಗಳ ಚಾತುರ್ಮಾಸ ಪ್ರಾರಂಬ.ವ್ಯಾಸ ಪೂಜೆ. ಈ ದಿವಸ ಖಗ್ರಾಸ ಚಂದ್ರ ಗ್ರಹಣ ಮಕರ ರಾಷಿ ಉತ್ರರಾಷಾಡ ನಕ್ಷತ್ರದಲ್ಲಿ ರಾತ್ರಿ ೧೧-೫೪ಕ್ಕೆ  ಗ್ರಹಣ ಸ್ಪರ್ಶವಾಗುವುದು. ದಕ್ಷಿಣ ದಿಕ್ಕಿನಿಂದ ಸ್ಪರ್ಶವಾಗುವುದು. ಮೋಕ್ಷ ರಾತ್ರಿ ಘಂಟೆ ೩-೪೯ಕ್ಕೆ ಗ್ರಹಣ ಬಿಡುಗಡೆ. ೩ಗಂಟೆ ೫೫ ನಿಮಿಷಗಳ ಸುದೀರ್ಘ ಗ್ರಹಣ ಇದಾಗಿರುತ್ತದೆ. ಶ್ರವಣ ನಕ್ಷತ್ರದಲ್ಲಿ ಬಿಡುಗಡೆ ಆಗುತ್ತದೆ. ಈ ದಿನ ಮದ್ಯಾಹ್ನ ೩-೩೦ರ ಒಳಗೆ ಬೋಜನಗಳನ್ನ ಮಾಡಬೇಕು ಗರ್ಬಿಣಿಯರಿಗೆ ಅಶಕ್ತರಿಗೆ ರೋಗಿಗಳು ಸಂಜೇ ಸೂರ್ಯಾಸ್ತದ ಒಳಗೆ ಬೋಜನ ಅಥವಾ ಫಲಾಹಾರ ಮಾಡತಕ್ಕದ್ದು. ಕಡಿಯುವದು ಕುಟ್ಟುವುದು ಬಿಸುವುದು ಮೊದಲಾದ ಕೆಲಸಗಳನ್ನ ಗ್ರಹಣ ಕಾಲದಲ್ಲಿ ಮಾಡಬಾರದು ಮಕರ ರಾಶಿಯ  ಉತ್ತರಾಷಾಡ ಶ್ರವಣಾ ನಕ್ಷತ್ರದವರಿಗೂ  ಮತ್ತು ಮಿಥುನ ಸಿಂಹ. ಕುಂಭ ರಾಶಿಯವರಿಗೆ ಅನಿಷ್ಠ ಫಲ. ದೋಷವುಳ್ಳವರು ಚಂದ್ರಬಿಂಬ ಕೇತು ಪ್ರತಿಮೆ ಅಕ್ಕಿಯಲ್ಲಿಟ್ಟು ಹುರುಳಿ ಮತ್ತು ಹೊಸ ವಸ್ತ್ರ ಸಹಿತ ಪೂಜೆ ಮಾಡಿ ದಾನ ಮಾಡಬೇಕು. ಗ್ರಹಣ ಫಲ. ಉತ್ತರಾಷಾಡ ಮತ್ತು ಶ್ರವಣ ನಕ್ಷತ್ರದಲ್ಲಿ ಗ್ರಹಣವಾಗುವದರಿಂದ ಉತ್ತರ ಭಾರತದಲ್ಲಿ ಅಗ್ನಿಬಯ ಬೂಕಂಪ ಜಲ ಅವಘಡ ಪ್ರಸಿಧ್ದ ಕಲಾಕಾರರ ಮತ್ತು ಅಧಿಕಾರಿಗಳ ಮೃತ್ಯು ಸಂಬವಿಸಬಹುದು. ವೃತಾದಿಗಳ ಹೊರತು ಯಾವುದೆ ಮಂಗಳ ಕಾರ್ಯಗಳನ್ನ ಈ ದಿವಸ ಮಾಡಬಾರದು ಶಿವಶಯನ ಕೋಕಿಲೊತ್ಸವ(ಕೊಕಿಲಾವೃತಂ)ಮಾಡಬೇಕು.

ರಾಶಿಫಲ.
 
ಮೇಷ. ಅಧಿಕಾರ ಚ್ಯುತಿ. ವೃಥಾಪವಾದ. ಕೆಲಸದಲ್ಲಿ ತಡೆ. ವೃಷಭ. ದೂರಪ್ರವಾಸ.(ಪರದೇಶಾಗಮನ) ಮಿತ್ರಾಗಮನ. ದೇವಾತಾರಾಧನೆ. ಕೆಲಸದಲ್ಲಿ ಯಶ.
 
ಮಿಥುನ. ಅಪಘಾತ ಬಯ. ಕುಟುಂಬದ ವಸ್ತುಗಳು ಕಾಣೆಯಾಗುವಿಕೆ. ಆಕಸ್ಮಿಕ ಜಾಡ್ಯ ಧನಹಾನಿ.
 
ಕರ್ಕ. ನರಸಂಬಂದಿ ಕಾಯಿಲೆ ಉಲ್ಬಣಿಸುವುದು. ಮೂತ್ರಕೋಶ ತೊಂದರೆ. ಸ್ತಿರಾಸ್ಥಿ ಕ್ರಯದ ಬಗ್ಗೆ ವಿಚಾರ. ಪತ್ನಿ ಅನಾರೋಗ್ಯ.
 
ಸಿಂಹ. ಶತ್ರುಕಾಟ. ಪುನಃ ಪುನಃ ತಿರುಗಾಟ ಕುಟುಂಬದವರಿಂದಲು ಮಿತ್ರರಿಂದಲೂ ಖರ್ಚು. ಮಾನಸಿಕ ಅಶಾಂತಿ.
 
ಕನ್ಯಾ. ಪುತ್ರರಿಂದ ಶ್ಲೋಕ ಉದರವ್ಯಾದಿ ಸಂಘ ಸಂಸ್ಥೆಗಳಿಂದ ಹಾನಿ. ಗೃಹನಿರ್ಮಾಣದಲ್ಲಿ ಆಸಕ್ತಿ.
 
ತುಲಾ. ಬಂದುಗಳಿಂದ ಲಾಭ. ಸೇವಕರು ಸಿಗುತ್ತಾರೆ ಪಶುಸಂಪತ್ತಿನಲ್ಲಿ ವೃದ್ದಿ. ವಾಹನದಿಂದ ತೊಂದರೆ.
 
ವೃಶ್ಚಿಕ. ಚಿಕ್ಕ ಪ್ರವಾಸ. ದಾಸ ದಾಸಿಯರಿಂದ ಅನಾವಶ್ಯಕ ತೊಂದರೆ. ದುಃಖದ ವಾರ್ತೆ ಶ್ರವಣ. ಮಾತಿನಲ್ಲಿ ಹಿಡಿತವಿರಲಿ ವಾಹನ ಬಯ.
 
ಧನು. ಕೌಟುಂಬಿಕ ಕಲಹ ತಾರಕಕ್ಕೆರಿತು. ಮದ್ಯಸ್ಥರಿಂದ ಲಾಭ. ಅಶಕ್ತತೆ. ಖರಿದಿ ವಿಕ್ರಿ ಮಾಡಬೇಡಿ.
 
ಮಕರ. ಆಪತ್ತಿನಲ್ಲಿ ಸಿಲುಕುವಿರಿ. ಮರಣ ಬಯ. ಹಳೆಯ ವ್ಯಾದಿಗಳ ಉಲ್ಬಣ. ಮಹತ್ವದ ಕೆಲಸ ಪ್ರಾರಂಬ.ಎಲ್ಲ ವಿಷಯಗಳಲ್ಲಿ ಸಾವದಾನ.
 
ಕುಂಬ. ಜೀವನದ ಮಹತ್ವದ ತಿರುವು. ದೊಡ್ಡ ಖರ್ಚು ಅದರಿಂದ ಮುಂದಿನ ಭವಿಷ್ಯದ ಲಾಭ. ಆರೋಗ್ಯ ಸುಧಾರಣೆ ಹಳೆಯ ವ್ಯಾಪಾರದ ಕೆಲಸದಿಂದ ಲಾಭ.
 
ಮೀನ. ಅನಿರೀಕ್ಷಿತ ಲಾಭ. ಮಿತ್ರ ಸಹಾಯ.ಸಹೊದರರ ಅಬಿವೃದ್ದಿ ಗ್ರಂಥರಚನೆ ಸಭೆ ಸಮಾರಂಭದಲ್ಲಿ ಬಾಗವಹಿಸುವಿಕೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ