*ಸಂಪಿಗೆ ಹೂವನ್ನು ಸಮರ್ಪಿಸಿ ಪ್ರಸಾದ ಸ್ವೀಕರಿಸಿದರೆ ಮಾಟ ಮಂತ್ರ, ಕ್ಷುದ್ರ ವಿದ್ಯೆಗಳು ನಮ್ಮ ಮೇಲೆ ಪ್ರಭಾವ ಬೀರಲ್ಲ. ಶತ್ರು ನಿವಾರಣೆ ಸಾಧ್ಯವಾಗುತ್ತದೆಯಂತೆ.
*ಪಾರಿಜಾತ ಹೂಗಳಿಂದ ಅರ್ಚನೆ ಮಾಡಿದರೆ ಕಾಲ ಸರ್ಪದೋಷ ನಿವಾರಣೆಯಾಗುವುದಷ್ಟೇ ಅಲ್ಲ ಮನಶ್ಯಾಂತಿಯೂ ಲಭಿಸುತ್ತದೆಯಂತೆ.
*ಮಲ್ಲಿಗೆ ಹೂವುಗಳಿಂದ ಪೂಜಿಸಿದರೆ ಅಧಿಕಾರದಲ್ಲಿರುವವರ ಮನಸ್ತಾಪ ಕಡಿಮೆಯಾಗುತ್ತದೆ ಹಾಗೂ ರೋಗಗಳಿಂದ ವಿಮುಕ್ತಿ ಲಭಿಸಿ ಆರೋಗ್ಯ ಸಿದ್ಧಿಸುತ್ತದೆಯಂತೆ.
* ಕಮಲದ ಹೂವಿನಿಂದ ಅರ್ಚನೆ ಮಾಡಿದರೆ ದಾರಿದ್ರ್ಯ ನಿವಾರಣೆಯಾಗಿ, ಶ್ರೀಮಂತರಾಗುತ್ತಾರಂತೆ.
*ನೈದಿಲೆ ಹೂವಗಳಿಂದ ಪೂಜಿಸಿದರೆ ಮಂತ್ರ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆಯಂತೆ.
*ತುಂಬೆ ಹೂವಿನಿಂದ ಶಿವನನ್ನು ಪೂಜಿಸಿದರೆ ಭಕ್ತಿ ಹೆಚ್ಚುತ್ತದೆಯಂತೆ.
*ನಂದಿಬಟ್ಟಲು ಹೂವಿಂದ ಶಿವನ ಪೂಜೆ ಮಾಡಿದರೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆಯಂತೆ.
*ಸೂರ್ಯಕಾಂತಿ ಹೂವನ್ನು ಪೂರ್ನಾಹುತಿಯಾಗಿ ಕೊಟ್ಟರೆ ಅಷ್ಟೈಶ್ವರ್ಯಗಳು ಸಿದ್ಧಿಸುತ್ತವೆ ಎನ್ನುತ್ತವೆ ಪುರಾಣಗಳು.
ಆದರೆ ಕನಕಾಂಬರದಿಂದ ಪೂಜೆ ಮಾಡಬಾರದು. ಆ ರೀತಿ ಮಾಡಿದರೆ ಜೀವನದಲ್ಲಿ ವೈರಾಗ್ಯ ಉಂಟಾಗುತ್ತದೆ ಎಂದು ಶಾಸ್ತ್ತಗಳು ಹೇಳುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ