ಕೂದಲನ್ನು ನ್ಯಾಚುರಲ್ ಆಗಿ ಕಪ್ಪಾಗಿಸುತ್ತದೆಯಂತೆ ಈ ಎಣ್ಣೆ

ಶುಕ್ರವಾರ, 8 ಜೂನ್ 2018 (15:21 IST)
ಬೆಂಗಳೂರು : ಕೆಲವರಿಗೆ ಕೂದಲು ಕಪ್ಪಾಗಿ ದಟ್ಟವಾಗಿ ಬೆಳೆಯಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಯಾವುದೋ ಹೇರ್ ಡೈ ಬಳಕೆ ಮಾಡುತ್ತಾರೆ. ಆದರೆ ಇದರಿಂದ ಕೂದಲು ಡ್ಯಾಮೇಜ್ ಆಗುತ್ತದೆ. ಅದರ ಬದಲು ನೀವು ಸಾಸಿವೆ ಎಣ್ಣೆ ಬಳಸುವುದರಿಂದ ನಿಮ್ಮ ಕೂದಲನ್ನು ನ್ಯಾಚುರಲ್ ಆಗಿ ಕಪ್ಪಾಗಿಸಬಹುದು.


ಸಾಸಿವೆ ಎಣ್ಣೆಯಲ್ಲಿ ಬೀಟಾಕ್ಯಾರೋಟಿನ್‌, ಐರನ್‌, ಫ್ಯಾಟಿ ಆ್ಯಸಿಡ್‌, ಕ್ಯಾಲ್ಶಿಯಂ ಮತ್ತು ಮೆಗ್ನೇಶಿಯಂ ಇದೆ. ಇದನ್ನು ರೆಗ್ಯುಲರ್‌ ಆಗಿ ತಲೆಗೆ ಮಸಾಜ್‌ ಮಾಡುವುದರಿಂದ ದಪ್ಪ ಹಾಗೂ ಉದ್ದವಾದ ಕೂದಲು ನಿಮ್ಮದಾಗುತ್ತದೆ.  ಸಾಸಿವೆ ಎಣ್ಣೆಯಲ್ಲಿ ಅಧಿಕ ಪ್ರಮಾಣದ ಸತುವಿನ ಅಂಶವಿರುತ್ತದೆ. ಆದ್ದರಿಂದ ಸಾಸಿವೆ ಎಣ್ಣೆಯನ್ನು ಕೂದಲ ಬುಡಕ್ಕೆ ಲೇಪಿಸಿ ಮಸಾಜ್‌ ಮಾಡುವುದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ಜೊತೆಗೆ ಕಪ್ಪಾದ ದಟ್ಟವಾದ ಕೂದಲು ನಿಮ್ಮದಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ