ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಶುಕ್ರವಾರ, 8 ಜೂನ್ 2018 (14:27 IST)
ಬೆಂಗಳೂರು : ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ನೀಡಿದ ಫಿಟ್ನೆಸ್ ಚಾಲೆಂಜ್ ಬಗ್ಗೆ ಈಗ ಚರ್ಚೆ ಜೋರಾಗಿ ನಡೆಯುತ್ತಿದ್ದು, ಸ್ಯಾಂಡಲ್ ವುಡ್ ನ  ಸ್ಟಾರ್ ನಟರಾದ ಸುದೀಪ್ ಹಾಗೂ ಯಶ್ ಅವರು ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ತಾವು ಫಿಟ್ ಎಂಬುದನ್ನು ತೋರಿಸಿದ್ದಾರೆ.


ಹಾಗೇ ಇದೀಗ ಸ್ಯಾಂಡಲ್ ವುಡ್ ನ ಮತ್ತೊಬ್ಬ ಸ್ಟಾರ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಿಜೆಪಿ ಶಾಸಕ ಡಾ. ಅಶ್ವತ್ ನಾರಾಯಣ್ ಹಾಗೂ ಹೇಮಂತ್ ಮುದ್ದಪ್ಪ ಅವರು ನೀಡಿದ ಫಿಟ್ನೆಸ್ ಚಾಲೆಂಜ್ ತೆಗೆದುಕೊಂಡು ತಾವು ನಟಿಸುತ್ತಿರುವ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ಚಿತ್ರತಂಡದೊಂದಿಗೆ ಫಿಟ್ನೆಸ್ ಚಾಲೆಂಜನ್ನು ಪೂರ್ಣಗೊಳಿಸಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಂತರ ನಟರಾದ ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಶ್ರೀಮುರಳಿ ಹಾಗೂ ಡ್ಯಾನಿಶ್ ಸೇಠ್ ಅವರಿಗೆ ಚಾಲೆಂಜನ್ನು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ