ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮೇಲಿನ ಹಂತಕ್ಕೇರುವ ಅವಕಾಶವಿದೆ. ಆದರೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗಲಿದೆ. ಹೊಸ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಸಂಗಾತಿಯ ಸಲಹೆ ಪಡೆಯಿರಿ.
ವೃಷಭ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅಡೆತಡೆಗಳು ಕಂಡುಬಂದೀತು. ಆಪ್ತರಿಂದಲೇ ಹಣಕಾಸಿನ ವಂಚನೆಯಾಗುವ ಬೀತಿ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ.
ಮಿಥುನ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದರಿಂದ ಎಲ್ಲವೂ ಶುಭವಾಗುವುದು. ನಿರುದ್ಯೋಗಿಗಳಿಗೆ ಯೋಗ್ಯತೆಗೆ ಅನುಗುಣವಾಗಿ ಉದ್ಯೋಗ ಲಭಿಸಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರೀಕ್ಷೆ ಎದುರಾಗಲಿದೆ.
ಕರ್ಕಟಕ: ಎಷ್ಟೇ ಓದಿದರೂ ಓದಿದ್ದು ತಲೆಗೆ ಹತ್ತುತ್ತಿಲ್ಲ ಎಂಬ ಸ್ಥಿತಿ ವಿದ್ಯಾರ್ಥಿಗಳದ್ದಾಗಲಿದೆ. ಆಪ್ತರ ಸಹಾಯ ಪಡೆಯಲಿದ್ದೀರಿ. ವ್ಯಾಪಾರೀ ವರ್ಗದವರಿಗೆ ಹಣಕಾಸಿನ ಅಡಚಣೆಗಳು ದೂರವಾದೀತು.
ಸಿಂಹ: ಸ್ವಯಂ ವೃತ್ತಿಯವರಿಗೆ ಉನ್ನತಿಗೇರಲು ಅವಕಾಶ ಸಿಗಲಿದೆ. ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಸಾಲಗಾರರ ಕಾಟದಿಂದ ಮುಕ್ತಿ ಪಡೆಯಲಿದ್ದೀರಿ. ಅನಗತ್ಯ ಚಿಂತೆ ಬೇಡ.
ಕನ್ಯಾ: ಹಿರಿಯರಿಗೆ ದೇವತಾ ಕಾರ್ಯಗಳಲ್ಲಿ ಭಾಗಿಯಾದ ಸಂತೋಷ ಸಿಗುವುದು. ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದಿದ್ದರೆ ಆರೋಗ್ಯ ಸಮಸ್ಯೆಯಾದೀತು.
ತುಲಾ: ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪರರ ಹಿತದ ಬಗ್ಗೆಯೂ ಚಿಂತನೆ ನಡೆಸಬೇಕಾಗುತ್ತದೆ. ದಾಂಪತ್ಯದಲ್ಲಿ ಸುಖ, ಸಮೃದ್ಧಿಯಿರುವುದು. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ.
ವೃಶ್ಚಿಕ: ಭೂಮ್ಯಾದಿ ಖರೀದಿ ವ್ಯವಹಾರಗಳನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡಿದರೆ ಉತ್ತಮ. ಆದಾಯ ಹೆಚ್ಚಳಕ್ಕೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ.
ಧನು: ಮಕ್ಕಳಿಂದ ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಯಾದೀತು. ಮನೆಗೆ ನೆಂಟರಿಷ್ಟರ ಭೇಟಿ ಸಾಧ‍್ಯತೆ. ಉದ್ಯೋಗ ಸಂಬಂಧವಾಗಿ ಪರವೂರಿಗೆ ಸಂಚರಿಸುವ ಸಾಧ‍್ಯತೆ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ.
ಮಕರ: ನಿಮ್ಮ ಹಿಂದಿನ ಬಾಕಿಗಳನ್ನು ತೀರಿಸಿ ಆರ್ಥಿಕವಾಗಿ ನೆಮ್ಮದಿ ಕಂಡುಕೊಳ್ಳಲಿದ್ದೀರಿ. ಕಳೆದು ಹೋದ ವಸ್ತುಗಳು ಮರಳಿ ಕೈ ಸೇರಲಿವೆ. ಸರಕಾರೀ ನೌಕರರಿಗೆ ಕಾರ್ಯದೊತ್ತಡ ಕಂಡುಬಂದೀತು. ತಾಳ್ಮೆಯಿರಲಿ.
ಕುಂಭ: ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ವೈಯಕ್ತಿಕ ಸಮಸ್ಯೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ನಿರುದ್ಯೋಗಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಚಿಂತೆ ಬೇಡ.
ಮೀನ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನಾದಿಗಳು ವೃದ್ಧಿಯಾಗಲಿದೆ. ನೆರೆಹೊರೆಯವರಿಗೆ ಸಹಾಯ ಮಾಡಲಿದ್ದೀರಿ. ಅಧ್ಯಯನಶೀಲರಿಗೆ, ಸರಕಾರೀ ನೌಕರರಿಗೆ ಮುನ್ನಡೆಯ ಯೋಗ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.