ಬೆಂಗಳೂರು: ಪ್ರತಿನಿತ್ಯ ರಾತ್ರಿ ಕನಸಿನಲ್ಲಿ ಅದೇನೇನೋ ಬಂದು ಹೋಗುತ್ತದೆ. ಕೆಲವುದಕ್ಕೆ ಅರ್ಥಗಳಿರುತ್ತವೆ! ಕನಸಿನಲ್ಲಿ ನಮ್ಮ ಹೆತ್ತ ತಾಯಿ ಬಂದರೆ ಅದಕ್ಕೆ ನಾನಾ ಅರ್ಥಗಳಿವೆ. ಏನೇನು ನೋಡೋಣ.
ಹಿಂದೂ ನಂಬಿಕೆ ಪ್ರಕಾರ ಕನಸಿನಲ್ಲಿ ನಾವು ತಾಯಿಯನ್ನು ಬಿಟ್ಟು ಹೋಗುವ ಸನ್ನಿವೇಶ ಕಂಡು ಬಂದರೆ ನಮ್ಮ ಜೀವನದಲ್ಲಿ ನಾವು ಏಕಾಂಗಿಯಾಗಿ ನಿರ್ಧಾರ ಕೈಗೊಳ್ಳುವ ಹಂತಕ್ಕೆ ಹೋಗಿದ್ದೇವೆ ಎಂದು ಅರ್ಥ.
ಹಾಗೆಯೇ ಕನಸಿನಲ್ಲಿ ಅಮ್ಮನ ಜತೆ ಮಾತನಾಡಿದರೆ ನೀವು ವಾಸ್ತವ ಬದುಕಿನಲ್ಲಿ ಏನೋ ಹೇಳಲಾಗದೇ ಚಡಪಡಿಸುತ್ತಿದ್ದೀರಿ ಎಂದರ್ಥ. ಕನಸಿನಲ್ಲಿ ಅಮ್ಮ ಬಂದು ಕರೆದಂತಾದರೆ, ನೀವು ಏನೋ ಕರ್ತವ್ಯ ನಿಭಾಯಿಸಬೇಕಾಗಿದೆ ಎಂದು ಅರ್ಥ. ಕೆಲವರಿಗೆ ಕನಸಿನಲ್ಲಿ ಅಮ್ಮ ತೀರಿಕೊಂಡ ಕನಸು ಬೀಳುತ್ತದೆ. ಇದರ ಅರ್ಥ ನೀವು ಕಡೆಗಣಿಸಲ್ಪಟ್ಟಿದ್ದೀರಿ ಎಂದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ