ಕಾಲಿನ ಪಾದ ತೊಳೆಯುವಾಗ ಈ ವಿಚಾರ ನೆನಪಿರಲಿ!
ಕಾಲು ತೊಳೆಯುವಾಗ ಪೂರ್ತಿ ಪಾದ ಒದ್ದೆಯಾಗುವಂತೆ ತೊಳೆಯಬೇಕು. ಅದರಲ್ಲೂ ಮೊದಲು ಕಾಲಿನ ಹಿಂಭಾಗ ಒದ್ದೆ ಮಾಡಬೇಕು. ಕಾಲು ತೊಳೆಯುವಾಗ ಕಾಲಿನ ಹಿಂಭಾಗಕ್ಕೆ ನೀರು ಸೋಕದೇ ಇದ್ದರೆ ಶನಿಯ ವಕ್ರ ದೃಷ್ಟಿ ಬಿದ್ದು, ದುರಾದೃಷ್ಟ ಹಿಂಬಾಲಿಸುತ್ತದೆ ಎಂಬ ನಂಬಿಕೆಯಿದೆ. ಹಾಗೆಯೇ ದೇವರಿಗೆ ಕೈ ಮುಗಿಯುವ ಮೊದಲು ಕಾಲಿನ ಒದ್ದೆ ಸಂಪೂರ್ಣವಾಗಿ ಒರೆಸಿ ಪ್ರಾರ್ಥನೆ ಮಾಡಿದರೆ ಶುಭ.