ಚಪ್ಪಲಿಗೂ ನಿಮ್ಮ ವೃತ್ತಿ ಜೀವನದ ಯಶಸ್ಸಿಗೂ ಸಂಬಂಧವಿದೆ!

ಗುರುವಾರ, 20 ಡಿಸೆಂಬರ್ 2018 (09:23 IST)
ಬೆಂಗಳೂರು: ಚಪ್ಪಲಿ ಎನ್ನುವುದು ಹಿಂದೂ ನಂಬಿಕೆ ಪ್ರಕಾರ ಶನಿಗೆ ಸಮಾನ. ಇದನ್ನು ಹೇಗೆ ಧರಿಸುತ್ತೀರಿ, ಇಟ್ಟುಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ವೃತ್ತಿ ಜೀವನದ ಯಶಸ್ಸು, ಅಪಜಯ ನಿರ್ಧಾರವಾಗುತ್ತದೆ ಎಂದರೆ ನೀವು ನಂಬಲೇಬೇಕು.


ಚಪ್ಪಲಿಗೂ ನಮ್ಮ ಜೀವನದ ಸುಖ-ದುಃಖಕ್ಕೂ ಸಂಬಂದವಿದೆ. ವಾಸ್ತು ಪ್ರಕಾರ ನಮಗೆ ಸರಿಹೊಂದದ ಚಪ್ಪಲಿ ಧರಿಸಿದರೆ ಐಶ್ವರ್ಯಕ್ಕೆ ಧಕ್ಕೆಯಾಗುವುದಲ್ಲದೆ, ವೃತ್ತಿ ಜೀವನದಲ್ಲೂ ಸೋಲಿಗೆ ಕಾರಣವಾಗುತ್ತದೆ.

ಯಾವತ್ತೂ ಯಾರಾದರೂ ಉಡುಗೊರೆಯಾಗಿ ಕೊಟ್ಟ, ಕದ್ದು ತಂದ ಚಪ್ಪಲಿ ಅಥವಾ ನಮ್ಮ ಚಪ್ಪಲಿ ಕಳುವಾಯಿತೆಂದು ಅಲ್ಲೇ ಇದ್ದ ಇನ್ನೊಂದು ಚಪ್ಪಲಿ ಹಾಕಿಕೊಂಡು ಬರುವುದು ಮುಂತಾದ್ದನ್ನು ಮಾಡಬಾರದು.

ಉದ್ಯೋಗ ಸಂದರ್ಶನಕ್ಕೆ ಹೋಗುವಾಗ ಹರಿದು ಹೋದ, ಕಿತ್ತು ಹೋದ ಚಪ್ಪಲಿ ಹಾಕಿಕೊಂಡು ಹೋಗಬೇಡಿ. ಇದು ದುರದೃಷ್ಟ ತರುತ್ತದೆ. ಹಾಗೆಯೇ ಊಟ ಮಾಡುವಾಗ ಚಪ್ಪಲಿ ಹಾಕಿಕೊಂಡು ಊಟ ಮಾಡಬಾರದು. ಹಾಗೆಯೇ ಚಪ್ಪಲಿಯನ್ನು ಇಡುವ ಸ್ಟ್ಯಾಂಡ್ ನ್ನು ಉತ್ತರ ದಿಕ್ಕಿಗೆ ಇಡುವುದರಿಂದ ಶುಭವಾಗದು. ಹಾಗೆಯೇ ಪ್ರವೇಶ ಧ್ವಾರದ ಬಳಿಯೇ ಶೂ ರ್ಯಾಕ್ ಇಡಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ