ಕೂದಲು ಉದುರುವಿಕೆ ಸಮಸ್ಯೆ ಕಾಡುತ್ತಿದೆಯಾ…? ಹಾಗಾದ್ರೆ ಈರುಳ್ಳಿ ರಸ ಹಚ್ಚಿಕೊಳ್ಳಿ!

ಶುಕ್ರವಾರ, 16 ಮಾರ್ಚ್ 2018 (11:44 IST)
ಬೆಂಗಳೂರು: ಕೂದಲುದುರುವ ಸಮಸ್ಯೆ ಎಲ್ಲರಲ್ಲೂ ಕಾಡುತ್ತೆ. ಧೂಳು, ಕಲುಷಿತ ಆಹಾರ, ಪೋಷಕಾಂಶ ರಹಿತವಾದ ಆಹಾರ ಸೇರಿದಂತೆ ಇಂದು ಅನೇಕರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಕೂದಲು ಉದುರುವಿಕೆಯನ್ನು ತಪ್ಪಿಸಲು ಇಂದು ಹಲವಾರು ಶ್ಯಾಂಪೂ, ಎಣ್ಣೆಗಳಿಗೆ ದುಡ್ಡು ಸುರಿಯುತ್ತಾರೆ.ಮನೆಯಲ್ಲಿಯೇ ಇರುವ ಈರುಳ್ಳಿಯನ್ನು ಉಪಯೋಗಿಸಿಕೊಂಡು ಈ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿಕೊಳ್ಳಬಹುದು, ಅದು ಹೇಗೆ ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ.

ಈರುಳ್ಳಿ ರಸ
ನೆತ್ತಿಯ ಮೇಲೆ ಈರುಳ್ಳಿ ರಸವನ್ನು ಅನ್ವಯಿಸುವುದರಿಂದ ಕೂದಲು ಉದುರುವುದನ್ನು ತಪ್ಪಿಸಿ ಚೆನ್ನಾಗಿ ಬೆಳೆಯಲು ಈರುಳ್ಳಿ ರಸ ಸಹಕಾರಿಯಾಗಿದೆ.
ಒಂದು ಚಮಚ ಈರುಳ್ಳಿ ರಸವನ್ನು ಹತ್ತಿಯಲ್ಲಿ ಅದ್ದಿ ಅದರಿಂದ ಕೂದಲಿನ ಬುಡಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಸ್ವಲ್ಪ ಸಮಯದ ನಂತರ ಶಾಂಪೂವಿನಿಂದ ಕೂದಲು ತೊಳೆಯಿರಿ ಇದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ.


ಈರುಳ್ಳಿ ಹಾಗೂ ಹರಳೆಣ್ಣೆ
ಹರಳೆಣ್ಣೆ ಕೂಡ ಕೂದಲು ಉದುರುವಿಕೆ ಸಮಸ್ಯೆ ನಿವಾರಿಸುತ್ತದೆ. ಸೊಂಪಾದ ಕೂದಲು ಬೆಳಯಲು ಹರಳೆಣ್ಣೆ ಕೂಡ ಸಹಕಾರಿ.
ಎರಡು ಚಮಚ ಈರುಳ್ಳಿ ರಸ, ಎರಡು ಚಮಚ ಹರಳೆಣ್ಣೆ ಮಿಶ್ರ ಮಾಡಿಕೊಂಡು ಕೂದಲಿನ ಬುಡಕ್ಕೆ ಹಚ್ಚಿ. ಒಂದು ಗಂಟೆಯ ನಂತರ ಶಾಂಪೂವಿನಿಂದ ತಲೆಸ್ನಾನ  ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ