ಒದ್ದೆ ಕೂದಲಿನಲ್ಲೇ ಹೊರಗಡೆ ಹೋದರೆ ಆಗುವ ಸಮಸ್ಯೆಗಳೇನು ಗೊತ್ತಾ?
ಶನಿವಾರ, 3 ಮಾರ್ಚ್ 2018 (09:01 IST)
ಬೆಂಗಳೂರು: ಕೆಲವೊಮ್ಮೆ ಕೆಲಸದ ಗಡಿಬಿಡಿಯಲ್ಲಿ ಹೊರಗಡೆ ಹೋಗುವಾಗ ಕೂದಲು ಒಣಗಿಸಿಕೊಳ್ಳಲೂ ಸಮಯವಿರುವುದಿಲ್ಲ. ಹಾಗೇ ಒದ್ದೆ ಕೂದಲಿನಲ್ಲಿ ಗಂಟು ಹಾಕಿಕೊಂಡು ಹೊರಗೆ ಹೋಗುತ್ತೇವೆ.
ಆದರೆ ಹೀಗೆ ಮಾಡುವುದರಿಂದ ಕೂದಲಿಗೆ, ಆರೋಗ್ಯಕ್ಕೆ ಹಲವು ಸಮಸ್ಯೆಗಳಿವೆ. ಅವು ಯಾವುವು ನೋಡೋಣ.
ತಲೆನೋವು
ಒದ್ದೆ ಕೂದಲಿನಲ್ಲಿ ಹೊರಗಡೆ ಹೋದರೆ ಅರೆ ಒದ್ದೆ ಕೂದಲು ಬಿಸಿಲಿಗೆ ಮೈಯೊಡ್ಡಿದಾಗ ತಲೆ ನೋವಾಗುವುದು ಸಹಜ.
ಕೂದಲು ಸೀಳುವಿಕೆ
ಕೂದಲು ಉದುರುವಿಕೆ, ಸೀಳು ಕೂದಲಿಗೆ ಒದ್ದೆ ಕೂದಲು ಕಾರಣ. ಹಾಗಾಗಿ ಸರಿಯಾಗಿ ಒಣಗಿಸಿಯೇ ಹೊರಗೆ ಹೋಗಿ.
ತಲೆಹೊಟ್ಟು
ಒದ್ದೆ ಕೂದಲಿನೊಂದಿಗೆ ಹೊರಗೆ ಹೋದರೆ ದೂಳು, ಕೊಳೆ ಬೇಗ ಅಂಟಿಕೊಳ್ಳುತ್ತದೆ. ಇದರಿಂದ ತಲೆಹೊಟ್ಟಿನ ಸಮಸ್ಯೆ ಬರಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ