ಜೀರಿಗೆ ಹಾಕಿ ನೀರು ಕುಡಿದರೆ ಚರ್ಮಕ್ಕೆ ಲಾಭ

ಬುಧವಾರ, 16 ಆಗಸ್ಟ್ 2017 (08:45 IST)
ಬೆಂಗಳೂರು: ಜೀರಿಗೆ ಹಾಕಿದ ಕುದಿಸಿದ ನೀರು ಕುಡಿಯುವುದರಿಂದ ಹೊಟ್ಟೆಗೆ ತಂಪು, ಜೀರ್ಣಕ್ರಿಯೆಗೆ ಸಹಕಾರಿ ಎಂದು ನಮಗೆ ಗೊತ್ತು. ಇದರ ಚರ್ಮಕ್ಕೂ  ಕಾಂತಿ ನೀಡುತ್ತದೆ ಎಂದರೆ ನೀವು ನಂಬಲೇಬೇಕು.


ಜೀರಿಗೆ ನೀರಿನಲ್ಲಿ ಪೊಟೇಷಿಯಂ, ಕ್ಯಾಲ್ಶಿಯಂ, ಸೆಲೆನಿಯಂ, ಕೋಪರ್ ಮತ್ತು ಮಾಂಗನೀಸ್ ಅಂಶ ಹೇರಳವಾಗಿದೆ. ಈ ಅಂಶಗಳು ನಮ್ಮ ಚರ್ಮಕ್ಕೆ ಬಹುಮುಖ್ಯವಾಗಿ ಅಗತ್ಯವಾಗಿದೆ.

ಅರಸಿನದ ಫೇಸ್ ಪ್ಯಾಕ್ ಮಾಡುವಾಗ ಅದಕ್ಕೆ ಕೊಂಚ ಜೀರಿಗೆ ನೀರು ಹಾಕಿಕೊಂಡು ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಹಾಗೇ ಇದು ಚರ್ಮವನ್ನು ಮೃದುಗೊಳಿಸುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ