‘ಆ ದಿನಗಳ’ ಕೆಲವು ‘ಮಿಸ್ಟೇಕ್’ ಗಳು!

ಮಂಗಳವಾರ, 15 ಆಗಸ್ಟ್ 2017 (07:10 IST)
ಬೆಂಗಳೂರು: ಮಹಿಳೆಯರ ಋತುಮತಿಯಾಗುವ ದಿನದ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಅದೊಂದು ನೈಸರ್ಗಿಕ ಪ್ರಕ್ರಿಯೆಯಷ್ಟೇ ಎಂದು ಎಷ್ಟೇ ಹೇಳಿದರೂ ಕೆಲವು ಆಚರಣೆಗಳನ್ನು ನಾವು ಬಿಡಲ್ಲ.

 
ದೇವಾಲಯಕ್ಕೆ ಹೋಗುವುದು, ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವರವರ ನಂಬಿಕೆ ಬಿಟ್ಟ ವಿಚಾರ. ಅದನ್ನು ಪ್ರಶ್ನಿಸುವ ಹಾಗಿಲ್ಲ. ಇದರ ಹೊರತಾಗಿಯೂ ಕೆಲವು ಕೆಟ್ಟ ನಂಬಿಕೆಗಳಿವೆ.

ಅಡುಗೆ ಮಾಡಬಾರದು
ಋತುಮತಿಯಾದ ಆ ಮೂರು ದಿನಗಳು ಅಡುಗೆ ಮಾಡಬಾರದು. ಪ್ರತ್ಯೇಕವಾಗಿ ಕೂರಬೇಕು ಎಂಬ ಪದ್ಧತಿ ಈಗಲೂ ಕೆಲವೆಡೆ ಆಚರಣೆಯಲ್ಲಿದೆ. ಅಸಲಿಗೆ, ಮಹಿಳೆಯರಿಗೆ ಆ ದಿನಗಳಲ್ಲಿ ವಿಶ್ರಾಂತಿ ನೀಡಬೇಕೆಂಬ ದೃಷ್ಟಿಯಿಂದ ಮಾಡಿಕೊಂಡ ಆಚರಣೆಯಿರಬಹುದು. ಆದರೆ ಅಡುಗೆ ಮಾಡಬಾರದು. ಮಾಡುವುದು ಅನಿಷ್ಠ ಎಂಬ ನಂಬಿಕೆಗಳಿಂದ ಹೊರಬನ್ನಿ.

ಕೆಟ್ಟ ರಕ್ತ
ಋತು ಸ್ರಾವದ ಸಂದರ್ಭದಲ್ಲಿ ಬಿಡುಗಡೆಯಾಗುವುದು ಕೆಟ್ಟ ರಕ್ತ ಎಂಬ ತಪ್ಪು ಕಲ್ಪನೆಯಿದೆ. ಇದೆಲ್ಲಾ ತಪ್ಪು.

ಗರ್ಭಿಣಿಯಾಗಲ್ಲ
ವೈಜ್ಞಾನಿಕವಾಗಿ ಒಬ್ಬ ಮಹಿಳೆಯದ ದೇಹದಲ್ಲಿ ವೀರ್ಯಾಣು ಐದು ದಿನಗಳವರೆಗೆ ಜೀವಂತವಾಗಿ ನಿಲ್ಲಬಹುದು. ಹಾಗಾಗಿ ಋತುಮತಿಯಾದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆಯಿಂದ ಗರ್ಭಿಣಿಯಾಗಲ್ಲ ಎನ್ನುವುದು ತಪ್ಪು ನಂಬಿಕೆ. ಅಪರೂಪದ ಪ್ರಕರಣದಲ್ಲಿ ಋತುಮತಿಯಾದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಗರ್ಭಿಣಿಯಾದ ಉದಾಹರಣೆಗಳೂ ಇವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ