ತೂಕ ಕಳೆದುಕೊಳ್ಳಲು ಚಪಾತಿ ಒಳ್ಳೇದಾ? ಅನ್ನ ಒಳ್ಳೆದಾ?

ಬುಧವಾರ, 10 ಜನವರಿ 2018 (08:35 IST)
ಬೆಂಗಳೂರು: ತೂಕ ಕಳೆದುಕೊಳ್ಳಲು ಬಯಸುವವರು ಚಪಾತಿ ತಿನ್ನಬೇಕಾ? ಅನ್ನ ಸೇವಿಸಬೇಕಾ? ಹೀಗೊಂದು ಅನುಮಾನವಿದ್ದರೆ ಈ ಲೇಖನ ಓದಿ.
 

ಎರಡರಲ್ಲೂ ಕಾರ್ಬೋ ಹೈಡ್ರೇಟ್ ಮತ್ತು ಫೈರ್ ಅಂಶ ಹೆಚ್ಚಿರುತ್ತದೆ. ಎರಡೂ ಜೀರ್ಣವಾಗುವುದು ಸುಲಭ. ಆದರೆ ಪೋಷಕಾಂಶಗಳ ವಿಷಯಕ್ಕೆ ಬಂದರೆ ಚಪಾತಿಯಲ್ಲಿ ಇದು ಹೇರಳವಾಗಿರುತ್ತದೆ.

ಪೋಷಕಾಂಶಗಳ ವಿಚಾರದಲ್ಲಿ ಚಪಾತಿಗೆ ಒಂದು ಅಂಕ ಹೆಚ್ಚು. ಆದರೆ ಇದರಲ್ಲಿ ಸೋಡಿಯಂ ಅಂಶ ಹೆಚ್ಚು. ಹಾಗಾಗಿ ಸೋಡಿಯಂ ಅಂಶ ಬೇಡದೇ ಇದ್ದವರು ಚಪಾತಿ ತಿನ್ನದೇ ಇರುವುದೇ ಒಳ್ಳೆಯದು. ಅನ್ನದಲ್ಲಿ ಚಪಾತಿಗೆ ಹೋಲಿಸಿದರೆ ಅಷ್ಟೊಂದು ಸೋಡಿಯಂ ಅಂಶ ಇರುವುದಿಲ್ಲ.

ಚಪಾತಿಯಲ್ಲಿ ಫೈಬರ್ ಅಂಶ ಹೆಚ್ಚು. ಹಾಗೆಯೇ ಕ್ಯಾಲೋರಿ ಹೆಚ್ಚು. ಹೀಗಾಗಿ ಬೇಗ ಹೊಟ್ಟೆ ತುಂಬುವುದಲ್ಲದೆ, ಬೇಗನೇ ಜೀರ್ಣವೂ ಆಗದು. ಅನ್ನಕ್ಕೆ ಹೋಲಿಸಿದರೆ ಚಪಾತಿಯಲ್ಲಿ ಪೊಟೇಶಿಯಂ, ಪೋಸ್ಪರಸ್, ಕ್ಯಾಲ್ಶಿಯಂ ಅಂಶ ಹೆಚ್ಚಿದ್ದು ಆರೋಗ್ಯಕ್ಯರ ಆಹಾರವಾಗಿದೆ. ಹಾಗಾಗಿ ಅನ್ನಕ್ಕೆ ಹೋಲಿಸಿದರೆ ಚಪಾತಿಯೇ ಬೆಸ್ಟ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ